Monday, July 4, 2022

Latest Posts

ಬಳ್ಳಾರಿ: ಕೋವಿಡ್-19 ಗುಣಮುಖರಾದ ಇಬ್ಬರು ಕೋವಿಡ್ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ

ಬಳ್ಳಾರಿ: ಕೊರೋನಾ ಸೊಂಕಿತ‌ ಜಿಲ್ಲೆಯ ಮತ್ತಿಬ್ಬರು ಇಂದು ಗುಣಮುಖರಾದ ಹಿನ್ನಲೆಯಲ್ಲಿ ಕೋವಿಡ್ ಜಿಲ್ಲಾಸ್ಪತ್ರೆಯಿಂದ ಶುಕ್ರವಾರ ಬಿಡುಗಡೆ ಮಾಡಲಾಯಿತು.
ಜಿಲ್ಲೆಯಲ್ಲಿ ಇದುವರೆಗೆ 13 ಜನ ಸೋಂಕಿತರಾಗಿದ್ದರು. ಅವರಲ್ಲಿ ಈ ಮೊದಲು ಗುಣಮುಖರಾದ ಪಿ-89,ಪಿ-91 ಮತ್ತು ಪಿ-141 ನಂತರ ಪಿ-90 & ಪಿ-151 ಅವರನ್ನು ಬಿಡುಗಡೆ ಮಾಡಲಾಗಿತ್ತು. ಮತ್ತೆ ಇನ್ನಿಬ್ಬರನ್ನು 21 ವರ್ಷ ವಯಸ್ಸಿನ ಪಿ-333 & 24 ವರ್ಷದ ಪಿ- 337 ಅವರನ್ನು ಗುಣಮುಖರಾದ ಹಿನ್ನೆಲೆ ಶುಕ್ರವಾರ ಬಿಡುಗಡೆ ಮಾಡಲಾಯಿತು.
ಇವರಿಬ್ಬರೂ ಸಹ ಹೊಸಪೇಟೆ ನಗರಕ್ಕೆ ಸೇರಿದವರಾಗಿದ್ದು, ಈ ಮುಂಚೆ ಬಿಡುಗಡೆಯಾದ ಜಿಲ್ಲೆಯ ಮೊದಲ ಸೊಂಕಿತ ಮಕ್ಕಳಾಗಿದ್ದಾರೆ ಹಾಗೂ ಅವರ ಪ್ರಥಮ ಸಂಪರ್ಕಿತರಾಗಿದ್ದಾರೆ.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಗುಣಮುಖರಾಗಿ ಮನೆಯತ್ತ ತೆರಳಲು ಸಿದ್ದರಾಗಿ ನಿಂತಿದ್ದವರಿಗೆ ಹೂಗುಚ್ಛ ನೀಡಿ, ಹಣ್ಣು-ಹಂಪಲು ನೀಡಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ನಂತರ ಅವರಿಗೆ ಪಡಿತರ ಕಿಟ್ ಕಳುಹಿಸಿಕೊಡಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss