Wednesday, June 29, 2022

Latest Posts

ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಹುಟ್ಟು ಹಬ್ಬ ಆಚರಣೆ, ಶಾಲಾ ಮಕ್ಕಳಿಗೆ ಅಭಿಮಾನಿಗಳಿಂದ ಪಠ್ಯಪುಸ್ತಕಗಳ ವಿತರಣೆ

ಬಳ್ಳಾರಿ: ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರ ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಶಾಲಾ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ವಿತರಿಸಿದರು.

ಸಮೀಪದ ಸಂಗನಕಲ್ಲು ಗ್ರಾಮದ ಶ್ರೀ ಆಂಜಿನೇಯ ದೇವಾಲಯದಲ್ಲಿ ಶಾಸಕರ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿ ಸರಳವಾಗಿ ಜನ್ಮದಿನವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಸರ್ಕಾರಿ ಹಿರೀಯ ಪ್ರಾಥಮಿಕ ವಠಾರ ಶಾಲೆ‌ ವಿದ್ಯಾರ್ಥಿಗಳಿಗೆ ಪಠ್ಯಪುಸಕ್ತ ಹಾಗೂ ಪೆನ್ನುಗಳನ್ನು ವಿತರಿಸಿದರು.

ಗ್ರಾಮದ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಯ‌ 10ನೇ ತರಗತಿಯಲ್ಲಿ ಕನ್ನಡದಲ್ಲಿ‌ ಹೆಚ್ಚು ಅಂಕಗಳನ್ನು ಪಡೆದ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗೋನಾಳ್ ನಾಗಭೂಷಣ್ ಗೌಡ ಅವರು ಮಕ್ಕಳನ್ನು ಸನ್ಮಾನಿಸಿದರು. ಶಾಸಕ ಬಿ.ನಾಗೇಂದ್ರ ಅವರ ಅಭಿಮಾನಿಗಳಾದ ಸಂಗನಕಲ್‌ ವಿಜಯ ಕುಮಾರ್, ಯು.ಪ್ರಕಾಶ್, ಭಾಷಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss