ಬಳ್ಳಾರಿ: ಚೀನಾ ದಾಳಿಯಲ್ಲಿ ಹುತಾತ್ಮರಾದ ವೀರಯೋಧರರಿಗೆ ಇಲ್ಲಿನ ಕೌಲ್ ಬಜಾರ್ ಬಿಜೆಪಿ ಮಂಡಲವತಿಯಿಂದ
ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬಿಜೆಪಿ ಮಂಡಲ ಅಧ್ಯಕ್ಷ ಜೆ.ಶಂಕರಪ್ಪ.ಎ.ಎಂ.ಸಂಜಯ್, ನೂರ್ ಭಾಷ, ಎನ್ ಕೆ ಎಚ್ ಬಸವರಾಜ್, ಚೌದರಿ ಸೀನಾ, ಅಬ್ದುಲ್ಲ, ನಾಗಭೂಷಣ, ಸುರೇಶ್, ವೆಂಕಟೇಶ್, ರಂಜಿತ್, ಅಲುವೆಲಮ್ಮ, ಸುನಿತಮ್ಮ, ವಿಜಕ್ಕ, ಅಂಜಲಿ, ವಿಶಾಲಿ. ಹನುಮಂತರಾವ್, ಚಂದ್ರ, ಕುಪ್ಪಸ್ವಾಮಿ.ಕಲೀಮ್.ಗೋವಿಂದ, ಮಂಜು, ರಾಮಕೃಷ್ಣ, ಶೇಖಣ್ಣ, ಶ್ರೀಧರ್, ಬಟ್ಟಿ ಉಮೇಶ್, ಸುಂಕಣ್ಣ, ರಾಜಾ, ವೆಂಕಟೇಶ್, ಆದಿ.ದುರ್ಗ, ರೇಮನ್ ಸೇರಿದಂತೆ ಇತರರು ಭಾಗವಹಿಸಿ ಅಗಲಿದ ವೀರ ಯೋಧರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿದರು. ಇದಕ್ಕೂ ಮುನ್ನ ಎಲ್ಲ ಗಣ್ಯರು ಎರಡು ನಿಮಿಷಗಳ ಕಾಲ ಮೌನಾಚರಣೆ ಸಲ್ಲಿಸಿ ಅಗಲಿದ ವೀರಯೋಧರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದರು. ಈ ವೇಳೆ ಜೈ ಜವಾನ್, ಜೈ ಜೈ ಜವಾನ್, ಅಮರ್ ರಹೇ ಅಮರ್ ರಹೇ, ವೀರ ಜವಾನ್ ಅಮರ್ ರಹೇ ಎನ್ನುವ ಘೊಷಣೆಗಳು ಮೊಳಗಿದವು.