ಬಳ್ಳಾರಿ: ಮೈಸೂರಿನ ಜ್ಯುಬಿಲಿಯಂಟ್ ಕಾರ್ಖಾನೆಯನ್ನು ಮೀರಿಸಿದ ಇಲ್ಲಿನ ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, 178 ರ ಗಡಿ ದಾಟಿದೆ. ಇದರ ಮಧ್ಯೆ ಹಾಲು ಮಾರುವ ವ್ಯಕ್ತಿಯೊಬ್ಬರಿಗೆ ಕೊರೊನಾ ಸೊಂಕು ವಕ್ಕರಿಸಿರುವುದು ದೃಡಪಟ್ಟಿದೆ.
ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ತೊರಣಗಲ್ ಸಮಿಪದ ತಿಮ್ಮಲಾಪೂರ ಗ್ರಾಮದ ಹಾಲು ಮಾರುವ ವ್ಯಕ್ತಿ, ಜಿಂದಾಲ್ ಕಾರ್ಖಾನೆಯ ನೌಕರರ ವಸತಿ ಗೃಹ ಸೇರಿದಂತೆ ಕಂಪನಿಯ ವಿದ್ಯಾನಗರ ವ್ಯಾಪ್ತಿಯಲ್ಲಿ ಹಾಲು ವಿತರಣೆ ಮಾಡಿದ್ದಾನೆ. ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಹಾಲು ಮಾರುವ ಕುಟುಂಬದ ಸದಸ್ಯರ ಜೊತೆಗೆ ಕಂಪನಿ ನೌಕರರಿಗೆ, ಅವರ ಕುಟುಂಬದ ಸದಸ್ಯರಿಗೆ ಹೆಮ್ಮಾರಿ ಭೀತಿ ಎದುರಾಗಿದೆ. ವಿದ್ಯಾನಗರ ವ್ಯಾಪ್ತಿಯಲ್ಲಿ ಕಂಪನಿಯ ಸಾವಿರಾರು ಜನ ನೌಕರರು ವಾಸವಾಗಿದ್ದಾರೆ. ಈ ವ್ಯಕ್ತಿ ೧೦೦ ಕ್ಕೂ ಹೆಚ್ಚು ಜನರಿಗೆ ಹಾಲು ಹಾಕುತ್ತಿದ್ದ ಎಂದು ಹೇಳಲಾಗುತ್ತಿದೆ. ಎಲ್ಲೆಲ್ಲಿ ಹಾಲು ವಿತರಿಸುತ್ತಿದ್ದ, ಅವರ ಗ್ರಾಮದಲ್ಲಿ ಯಾರ ಸಂಪರ್ಕ ಹೊಂದಿದ್ದರು ಎನ್ನುವ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ.