Wednesday, August 10, 2022

Latest Posts

ಬಳ್ಳಾರಿ| ಜಿಂದಾಲ್ ಪ್ರದೇಶಕ್ಕೆ ಅಧಿಕಾರಿಗಳ ದೌಡು, ಕಂಪನಿ ಅಧಿಕಾರಿಗಳಿಗೆ ತರಾಟೆ!

ಬಳ್ಳಾರಿ: ಜಿಲ್ಲೆಯ ಪ್ರತಿಷ್ಠಿತ ಕಾರ್ಖಾನೆಯಾದ ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿ ಹೆಮ್ಮಾರಿ ರುದ್ರನರ್ತನ ಮುಂದುವರೆದಿದ್ದು, ೧೮೦ ರಗಡಿ ದಾಟಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಜೂನ್ ೧೮ ರಿಂದ ೩೦ ರವರೆಗೆ ಕಂಪನಿಗೆ ಒಳ ಹೋಗುವುದನ್ನು, ಬರುವುದನ್ನು ಸಂಪೂರ್ಣ ನಿಷೇದಿಸಿದೆ. ಕಂಪೆನಿಯವರು ಸರ್ಕಾರದ ನಿಯಮವನ್ನು ಉಲ್ಲಂಘಿಸಿ ರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡು ತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಡಳಿತದ ಅಧಿಕಾರಿಗಳ ದಂಡೇ ಕಂಪನಿಗೆ ದೌಡಾಯಿಸಿ ಪರಿಶೀಲಿಸಿತು.
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಎಸ್ಪಿ ಸಿ.ಕೆ.ಬಾಬಾ,ಅಪರ ಜಿಲ್ಲಾಧಿಕಾರಿ ಮಂಜುನಾಥ,ಸಹಾಯಕ ಆಯುಕ್ತರಾದ ಶೇಖ್ವ ತನ್ವೀರ್ ಅಸೀಫ್, ರಮೇಶ ಕೋನರೆಡ್ಡಿ ಅಧಿಕಾರಿಗಳ ತಂಡದ ಸದಸ್ಯರು, ಜಿಂದಾಲ್ ವ್ಯಾಪ್ತಿಯಲ್ಲಿ  ಸೀಲ್‌ಡೌನ್ ಮಾಡಲಾಗಿರುವ ಕಡೆ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವ್ಯಾಪ್ತಿಯಲ್ಲಿ ಸೀಲ್ ಡೌನ್ ಮಾಡಲಾಗಿರುವುದನ್ನು ಪರಿಶೀಲಿಸಿದರು. ಕೋವಿಡ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಸರಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಡಿಸಿ ಮತ್ತು ಎಸ್ಪಿ ಅವರು ಸ್ಥಳದಲ್ಲಿದ್ದ ಜಿಂದಾಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಂದಾಲ್‌ ನ ಮಂಜುನಾಥ ಪ್ರಭು ಅವರು ಇದುವರೆಗೆ ಜಿಲ್ಲಾಡಳಿತದ ಸೂಚನೆಯಂತೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ವಿವರಣೆ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss