Thursday, August 18, 2022

Latest Posts

ಬಳ್ಳಾರಿ ಜಿಲ್ಲೆಯಲ್ಲಿ 26 ಜನ ಪೊಲೀಸ್ ಸಿಬ್ಬಂದಿಗಳಿಗೆ ಸೊಂಕು ದೃಢ

ಬಳ್ಳಾರಿ: ಸ್ಟೀಲ್ ನಗರಿ ಬಳ್ಳಾರಿ ಜಿಲ್ಲೆಯಲ್ಲಿ 26 ಜನ ಪೊಲೀಸ್ ಸಿಬ್ಬಂದಿಗಳಿಗೆ ಸೊಂಕು ಇರುವುದು ದೃಡಪಟ್ಟಿದೆ. ಶನಿವಾರ ಜಿಲ್ಲಾ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ಆಶ್ರಯದಲ್ಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಆ್ಯಂಟಿಜೆನ್ ಕಿಟ್ ಮೂಲಕ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಈ ಪೈಕಿ ಜಿಲ್ಲೆಯ 26 ಜನ ಪೊಲೀಸ್ ಸಿಬ್ಬಂದಿಗಳಿಗೆ ಸೊಂಕು ಇರುವುದು ದೃಡಪಟ್ಟಿದೆ. 50 ವರ್ಷ ಮೇಲ್ಪಟ್ಟ ಪೊಲೀಸ್ ಸಿಬ್ಬಂದಿಗಳಿಗೆ ಕೊವೀಡ್ ಪರೀಕ್ಷೆ ಒಳಪಡಿಸಲಾಯಿತು. ಪರೀಕ್ಷಾ ವರದಿ ಅರ್ಧ ಗಂಟೆಯಲ್ಲೇ ವರದಿ ಬಂದಿದೆ. ತಪಾಸಣೆಗೆ ಒಳಗಾದವರ‌ ಪೈಕಿ 26 ಜನರಿಗೆ ಸೊಂಕು ಇರುವುದು ದೃಡಪಟ್ಟಿದ್ದು, ಸೊಂಕಿತರೆಲ್ಲರೂ ಹೋಂ ಐಸೋಲೇಶನ್ ನಲ್ಲಿ ಇರಬೇಕು ಎಂದು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಸಿ.ಕೆ.ಬಾಬಾ ಹಾಗೂ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಸೂಚಿಸಿದ್ದಾರೆ. ಪೊಲೀಸ್ ಸಿಬ್ಬಂದಿಗಳಿಗೆ ಸೊಂಕು ಹೆಚ್ಚು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ಜಿಲ್ಲೆಯ ಎಲ್ಲ ಠಾಣೆಗಳಲ್ಲು ಪರೀಕ್ಷೆ ನಡೆಸಲಾಗುವುದು ಎಂದು ಎಸ್ಪಿ ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!