ಬಳ್ಳಾರಿ: ಜಿಲ್ಲೆಯ ನಾನಾ ಕಡೆ ಗಾಂಜಾ ಸಾಗಿಸುತ್ತಿದ್ದ 5 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರಿಂದ 57 ಕಿಲೋ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಡಿ.ಸಿ. ನಗರ, ಪ್ರಶಾಂತ ನಗರಗಳ ಕಡೆ ಆಟೋದಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳ ಖಚಿತ ಮಾಹಿತಿ ಆಧರಿಸಿ ಅಪರಾಧ ಠಾಣೆಯ ಸಿಪಿಐ ಜಿ.ಆರ್. ಷಣ್ಮುಖಪ್ಪ ಮತ್ತು ಸಿಬ್ಬಂದಿಗಳ ತಂಡ ದಾಳಿ ನಡೆಸಿದ್ದಾರೆ. ಈ ವೇಳೆ 11 ಲಕ್ಷದ 40 ಸಾವಿರ ಮೌಲ್ಯದ 57 ಕಿಲೋ ಗಾಂಜಾ ವಶಕ್ಕೆ ಪಡೆದಿದ್ದಾರೆ. ಗಾಂಜಾ ಸಾಗಿಸುತ್ತಿದ್ದ ಐದು ಆರೋಪಿಗಳನ್ನು ಬಂಧಿಸಿದ್ದು, ನೆರೆಯ ಆಂಧ್ರ ಪ್ರದೇಶಕ್ಕೆ ಸೇರಿದ ಅನಂತಪುರಂ ಜಿಲ್ಲೆಯ ಎ.ರಸೂಲ್ ಖಾನ್, ಸಿ.ನಾಗರಾಜ್, ಬಳ್ಳಾರಿಯ ಪ್ರಶಾಂತ ನಗರದ ಮೊಹಮ್ಮದ್ ಜಾಫರ್, ಎಂ.ರಾಮು, ಜಾಗೃತಿ ನಗರದ ಸೈಯದ್ ಮೊಹಮ್ಮದ್ ಅಜರ್ ಎಂಬುವವರು ಬಂಧಿಸಿದ್ದು, ವೇಣುನಾಯ್ಡು ಮತ್ತು ದೌಲ ಎಂಬ ಆರೋಪಿಗಳು ಪರಾರಿಯಾಗಿದ್ದಾರೆ. ಈ ಪ್ರಕರಣವನ್ನು ಪತ್ತೆ ಹಚ್ಚಿದ ಆರ್ ಷಣ್ಮುಖಪ್ಪ, ಪೊಲೀಸ್ ಇನ್ಸ್ ಪೆಕ್ಟರ್, ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆ, ಹಾಗೂ ಠಾಣೆಯ ಸಿಬ್ಬಂದಿಗಳಾದ ಹೆಚ್. ಸಿ. ದಿನಕರ್, ಸುರೇಶ್ , ಪ್ರೇಮನಾಥ ರೆಡ್ಡಿ, ಬಿ,ವಿಜಯ ಕುಮಾರ್, ಮ.ಹೆಚ್. ಸಿ ರೇಷ್ಮಾ ಹೊಸಮನಿ, ಪಿ.ಸಿಗಳಾದ ಸುರೇಶ್, ಬಿ.ಆರ್ ಉಮೇಶ್, ಉಮಾಮಹೇಶ್ವರ, ವೆಂಕಟೇಶ್, ಮ.ಪಿ.ಸಿ ಮಮತಾ ಅವರನ್ನು ಎಸ್ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಪ್ರಶಂಸಿದ್ದಾರೆ.