Wednesday, July 6, 2022

Latest Posts

ಬಳ್ಳಾರಿ| ನಗರದ 26 ನೇ ವಾರ್ಡ್ ಕಂಟೋನ್ಮೆಂಟ್ ಪ್ರದೇಶದಲ್ಲಿ ತೀವ್ರ ‘ಕೊರೋನಾ’ ಕಟ್ಟೆಚ್ವರ

ಬಳ್ಳಾರಿ: ನಗರದ 26 ನೇ ವಾರ್ಡ್ ಕಂಟೋನ್ಮೆಂಟ್ ಪ್ರದೇಶದಲ್ಲಿ ಕೊರೋನಾ ಕೇಸ್ ಇತ್ತಿಚಗೆ ಎರಡು ಪ್ರಕರಣಗಳು ಪತ್ತೆಯಾದ ಹಿನ್ನೆಲೆ ಈ ಪ್ರದೇಶಲ್ಲಿ ತಿವ್ರ ಕಟ್ಟೆಚ್ವರ ವಹಿಸಲಾಗಿದೆ. ಬಡ ಜನರು, ಕುಲಿಕಾರರು ಸಂಕಷ್ಟಕ್ಕೆ ಸಿಲಿಕಿದ್ದು, ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಭಾನುವಾರ ಆಹಾರದ ಕಿಟ್ ಹಾಗು ತರಕಾರಿಗಳನ್ನು ವಿತರಿದಿಸಿದರು. ಈ ಪ್ರದೇಶದ ಜನರ ಪರಿಸ್ಥಿತಿಯನ್ನು ಮನಗೊಂಡಿರುವ ಶಾಸಕರು, ಬಾನುವಾರ ನಸುಕಿನ ಜಾವ ಈ ಪ್ರದೇಶಕ್ಕೆ ತೆರಳಿ ಎಲ್ಲ ವರ್ಗದ ಜನರಿಗೆ ಕಿಟ್ ಗಳನ್ನು ವಿತರಿಸಿದರು. ಶಾಸಕ ಬಿ.ನಾಗೇಂದ್ರ ಅವರು ಮಾತನಾಡಿ, ಈ ತುರ್ತು ಸಂಧರ್ಭದಲ್ಲಿ ಬಡಜನತೆಗೆ ಹಾಗೂ ಕೂಲಿ ಕಾರ್ಮಿಕರಿಗೆ ತುಂಬ ಅವಶ್ಯಕತೆ ಇರುವ ದಿನಸಿ ಆಹಾರದ ಪದಾರ್ಥಗಳನ್ನು ಮತ್ತು ವಿವಿಧ ತರಕಾರಿಗಳು, ಹಾಲು, ಮೊಸರು ಸೇರಿದಂತೆ ದಿನ ಬಳೆಕೆಯ ಅಗತ್ಯವಾದ ಆಹಾರ ಪದಾರ್ಥಗಳನ್ನು 10 ದಿನಗಳವರೆಗೆ ಬೇಕಾಗುವಷ್ಟು ಆಹಾರದ ಕೀಟ್ ಗಳನ್ನು ಶಾಸಕರು ಓದಗಿಸಿಕೊಟ್ಟರು,ಮುಂದಿನ ದಿನಗಳಲ್ಲಿ ಸಹ ತಮ್ಮ ಸೇವೆಗೆ ಬದ್ದನಾಗಿರುವೆ ಎಂದು ತಿಳಿಸಿದರು, ಈ ಸಂಧರ್ಭದಲ್ಲಿ ತಹಶಿಲ್ದಾರರ, ಬಳ್ಳಾರಿ, PSI CB, ಕೀಟ್ ವಿತರಣೆಯಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss