Thursday, July 7, 2022

Latest Posts

ಬಳ್ಳಾರಿ ನಗರ ಅಭಿವೃದ್ದಿಯಲ್ಲಿ ರಾಜ್ಯದಲ್ಲೇ ಮಾದರಿ: ಶಾಸಕ ಜಿ. ಸೋಮಶೇಖರ್ ರೆಡ್ಡಿ

ಹೊಸದಿಗಂತ ವರದಿ, ಬಳ್ಳಾರಿ:

ನಗರದ ಅಭಿವೃದ್ಧಿಗೆ ಇಲ್ಲಿವರೆಗೆ ಕೊಟ್ಯಾಂತರ ರೂ.ವೆಚ್ಚದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ‌ ನೀಡಿದ್ದು, ಬರುವ ದಿನಗಳಲ್ಲಿ ಇನ್ನೂ ಅಭಿವೃದ್ಧಿಗೆ ಅನುದಾನ ಹರಿದು ಬರಲಿದೆ. ಅವಧಿಯಲ್ಲಿ ಬಳ್ಳಾರಿ ನಗರ ಅಭಿವೃದ್ದಿಯಲ್ಲಿ ರಾಜ್ಯದಲ್ಲೇ ಮಾದರಿಯಾಗಲಿದೆ ಎಂದು ನಗರದ ಶಾಸಕ ಜಿ. ಸೋಮಶೇಖರ್ ರೆಡ್ಡಿ ಅವರು ಹೇಳಿದರು.

ನಗರದ 35 ನೇ ವಾರ್ಡಿನ ಅಂಬಾಭವಾನಿ ದೇವಸ್ಥಾನದ ಪ್ರಾಂಗಣದಲ್ಲಿ ಶಾಸಕರ ಅನುದಾನದಲ್ಲಿ ಸುಮಾರು 10 ಲಕ್ಷ ರೂ. ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಹಾಗೂ ದೇವಾಲಯದ ಬಳಿ 20 ಲಕ್ಷ ರೂ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಬಳ್ಳಾರಿ ‌ನಗರ ವ್ಯಾಪ್ತಿಯ ಎಲ್ಲ ಕಡೆಗಳಲ್ಲೂ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ‌ ನಿಡಲಾಗಿದ್ದು, ಬಹುತೇಕ ಕಾಮಗಾರಿಗಳು ಮುಕ್ತಾಯಗೊಂಡಿವೆ. ಇನ್ನೂ ಕೆಲ ಕಾಮಗಾರಿಗಳು ಪ್ರಗತಿಯಲ್ಲಿವೆ. ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಎಲ್ಲ ವಾರ್ಡ್ ಗಳಲ್ಲಿ ಶುದ್ದ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಹಿಂದೆ ಇಪ್ಪತ್ತು ದಿನಕ್ಕೋಮ್ಮೆ‌ ನೀರು ಸರಬರಾಜು ಪದ್ದತಿ ಇತ್ತು. ಆದರೇ, ಎಲ್ಲ‌ಸಮಸ್ಯೆ ಸರಿಪಡಿಸಿ ವಾರಕ್ಕೋಮ್ಮೆ ಶುದ್ದ ನೀರು ಪೊರೈಕೆ ಮಾಡಲಾಗುತ್ತಿದೆ.

ದಿನದ‌ ಇಪತ್ನಾಲ್ಕು ಘಂಟೆ ನೀರಿನ ಸೌಲಭ್ಯ ಕಲ್ಪಿಸುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಎಲ್ಲ ಕಡೆಗಳಲ್ಲಿ ನಲ್ಲಿ‌ ಜೊಡಿಸುವ ಕೆಲಸ ಮೂರ್ಣಗೊಂಡಿದೆ. ಶೀಘ್ರದಲ್ಲೇ ಈ ಸೌಲಭ್ಯ ನಾಗರಿಕರಿಗೆ ಮುಕ್ತವಾಗಲಿದೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಶ್ರಿನಿವಾಸ್ ಮೋತ್ಕರ್, ವೀರಶೇಖರ್ ರೆಡ್ಡಿ, ಕೃಷ್ಣರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು

ಈ ಸಂದರ್ಭದಲ್ಲಿ ಅಂಬಾಭವಾನಿ ದೇವಾಲಯದ ಟ್ರಸ್ಟಿಗಳು, 35 ನೇ ವಾರ್ಡಿನ ಮುಖಂಡರುಗಳಾದ ಶ್ರೀ ಪ್ರವೀಣ್, ಸುಬ್ಬಾರೆಡ್ಡಿ ಹಾಗೂ ವಾರ್ಡಿನ ಎಲ್ಲಾ ಪ್ರಮುಖ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss