ಬಳ್ಳಾರಿ: ಜಿಲ್ಲೆಯ ಕೊಟ್ಟೂರು ಪೊಲೀಸ್ ಠಾಣೆ ಪೇದೆಯೋಬ್ಬರಿಗೆ ವಕ್ಕರಿಸಿದ್ದ ಮಹಾ ಹೆಮ್ಮಾರಿ ಮತ್ತೆ ಜಿಲ್ಲೆಯ ಮೂರು ಪೊಲೀಸ್ ಠಾಣೆಯ ಇಬ್ಬರು ಪೇದೆ ಹಾಗೂ ಒಬ್ಬ ಸಿಪಿಐ ಅಧಿಕಾರಿಗೆ ವಕ್ಕರಿದ್ದು, ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ೬೦ಕ್ಕೆ ಏರಿಕೆಯಾಗಿದೆ. ಹೊಸಪೇಟೆ ನಗರ ಪೊಲೀಸ್ ಠಾಣೆ ಪೇದೆ, ಮರಿಯಮ್ಮನಹಳ್ಳಿ ಠಾಣೆ ಪೇದೆ ಹಾಗೂ ಟಿ.ಬಿ.ಡ್ಯಾಂ ಠಾಣೆ ಸಿಪಿಐ ಅಧಿಕಾರಿಗೆ ಮಹಾ ಹೆಮ್ಮಾರಿ ಕೊರೊನಾ ಸೊಂಕು ಇರುವುದು ದ್ರಢಪಟ್ಟಿದೆ. ಕೂಡಲೇ ಮೂವರನ್ನು ನಗರದ ಕೊವೀಡ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೂರು ಠಾಣೆ ವ್ಯಾಪ್ತಿಯಲ್ಲಿ ಸ್ಯಾನಿಟ್ಯಜರ್ ಸಿಂಪಡಣೆ, ಸ್ವಚ್ಛತಾ ಕಾರ್ಯ ನಡೆದಿದ್ದು, ಮೂವರನ್ನು ಸಂಪರ್ಕ ಹೊಂದಿದ್ದವರನ್ನು ಕ್ವಾರೆಂಟ್ಯನ್ ಕೇಂದ್ರದಲ್ಲಿ ಇರಿಸಿ ತಪಾಸಣೆ ನಡೆಸಲಾಗುತ್ತಿದೆ. ವಸತಿ ಗ್ರಹಗಳ ಪ್ಯಾಪ್ರಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ, ಮೂರು ಠಾಣೆಯನ್ನು ಸೀಲ್ ಡೌನ್ ಮಾಡುವ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಬೇಕಿದೆ.
ಇಲ್ಲಿವರೆಗೆ ಜಿಲ್ಲೆಯಲ್ಲಿ ೬೦ ಜನ ಸೊಂಕಿತರಿದ್ದು, ಅದರಲ್ಲಿ ಒಬ್ಬರು ಮ್ರತಪಟ್ಟಿದ್ದು, ೪೩ ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ೧೬ ಜನ ಸೊಂಕಿತರು ಜಿಲ್ಲಾ ಕೊವೀಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.