ಬಳ್ಳಾರಿ: ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ ಮತ್ತೆ ಮೂವರಿಗೆ ಸೊಂಕು ದೃಢಪಟ್ಟಿದ್ದು, ಸೊಂಕಿತರ ಸಂಖ್ಯೆ ಜಿಲ್ಲೆಯಲ್ಲಿ 36ಕ್ಕೆ ಏರಿಕೆಯಾಗಿದೆ.
ವಿವಾಹ ಆಮಂತ್ರಣ ಪತ್ರಿಕೆ ನೀಡಲು ಮುಂಬೈಗೆ ತೆರಳಿದ್ದ 40 ವರ್ಷದ ಮಹಿಳೆ ಹಾಗೂ 48 ವರ್ಷದ ಪುರುಷ ಮತ್ತು ದೆಹಲಿ ಹಾಗು ಮಥುರಾಗೆ ತೆರಳಿದ್ದ 24 ವರ್ಷದ ವ್ಯಕ್ತಿಗೆ ಸೊಂಕು ದೃಢಪಟ್ಟಿದೆ.
ಮೂವರನ್ನು ಬಳ್ಳಾರಿಯ ಡೆಂಟಲ್ ಕಾಲೇಜು, ಹೊಸಪೇಟೆಯ ಜಂಬುನಾಥ ಗುಡ್ಡದ ವಸತಿ ನಿಲಯ ಹಾಗೂ ನಗರದ ಬಿಸಿಎಂ ಹಾಸ್ಟೆಲ್ ನಲ್ಲಿ ಇವರನ್ನು ಕ್ವಾರೆಂಟ್ಯನ್ ಮಾಡಲಾಗಿತ್ತು. ಎಲ್ಲರ ಗಂಟಲ ದ್ರವದ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಸೊಂಕು ಇರುವುದು ದೃಢಪಟ್ಟಿದೆ. ಕೂಡಲೇ ಸೊಂಕಿತರನ್ನು ನಗರದ ಜಿಲ್ಲಾ ಕೊವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.