Wednesday, August 17, 2022

Latest Posts

ಬಳ್ಳಾರಿ| ಯುವತಿಗೆ ಡೆಡ್ಲಿ ಸೊಂಕು ದೃಢ: ವಿಮ್ಸ್ ಆಸ್ಪತ್ರೆಯಲ್ಲಿ ಆತಂಕ

ಬಳ್ಳಾರಿ: ಜಿಲ್ಲೆಯ ಸಿರಗುಪ್ಪ ತಾಲೂಕಿನ ಗೊಸಬಾಳ್ ಗ್ರಾಮದ‌‌ 18 ವಷದ ಯುವತಿಯೊಬ್ಬರಿಗೆ (ಪಿ.930)ಡೆಡ್ಲಿ ಕೊರೋನಾ ಸೊಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 17ಕ್ಕೆ ಏರಿದಂತಾಗಿದೆ. ಇಲ್ಲಿವರೆಗೆ 12 ಜನ ಸೊಂಕಿತರು ಕೊವಿಡ್ ಆಸ್ಪತ್ರೆಯಲ್ಲಿ‌ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 5 ಜನ ಸೊಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೊಂಕಿತ ಪಿ.930 ಯುವತಿ ಕಳೆದ ಮೂರು ದಿನಗಳ ಹಿಂದೆ, ಉಸಿರಾಟದ ತೊಂದರೆ, ತಿವ್ರ ಜ್ವರದಿಂದ ನಗರದ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಳು. ಮುಂಜಾಗ್ರತಾ ಕ್ರಮವಾಗಿ ವ್ಯದ್ಯರು ಕೊವಿಡ್-19 ಪರೀಕ್ಷೆ ನಡೆಸಿದ್ದರು. ವರದಿಯಲ್ಲಿ‌ ಯುವತಿಗೆ ಸೊಂಕು‌ ಇರುವುದು ದೃಢಪಟ್ಟಿದೆ. ಕೂಡಲೆ ಯುವರಿಯನ್ನು ಕೊವಿಡ್-19 ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಸೊಂಕಿತ ಯುವತಿ ನೆರೆಯ ಆಂಧ್ರದ ಹೊಳಲಗುಂದಿಯಲ್ಲಿರುವ ಸಹೊದರ‌‌ ಮನೆಗೆ ತೆರಳಿದ್ದರು. ಇನ್ನೂ ಯುವತಿಯ ಟ್ರಾವೆಲ್‌ ಹಿಸ್ಟರಿ ಹಿಡುಕಾಟ ಮುಂದುವರೆದಿದೆ.

ವಿಮ್ಸ್ ನಲ್ಲಿ ಆತಂಕ: ಯುವತಿ ಪಿ.930 ಸೊಂಕಿತ ಮಹಿಳೆಗೆ ಚಿಕಿತ್ಸೆ ನೀಡಿದ ವ್ಯದ್ಯರು, ಸಿಬ್ಬಂದಿಗಳು ಸೇರಿ ಇಡೀ ಆಸ್ಪತ್ರೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಈಗಾಗಲೇ ಯುವತಿಗೆ‌ ಚಿಕಿತ್ಸೆ ನೀಡಿದವರನ್ನು ಕ್ವಾರಂಟೆನ್ ಮಾಡಲಾಗಿದೆ. ಆದರೂ ಆಸ್ಪತ್ರೆ ಸಿಬ್ಬಂದಿಗಳು, ವ್ಯದ್ಯರಲ್ಲಿ ಆತಂಕ ಮನೆ‌ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!