Wednesday, August 17, 2022

Latest Posts

ಬಳ್ಳಾರಿ ರಾಘವಾಚಾರ್ಯರ 140ನೇ ಜಯಂತ್ಯುತ್ಸವ ಆಚರಣೆ

ಬಳ್ಳಾರಿ: ದೇಶ, ವಿದೇಶಗಳ ಗಮನಸೆಳೆದ ಹೆಸರಾಂತ ಕಲಾವಿಧ ಶ್ರೀ ರಾಘವಾಚಾರ್ಯರ 140 ನೇ ಜಯಂತ್ಯುತ್ಸವವನ್ನು ಇಲ್ಲಿನ ಬ್ರಾಹ್ಮಣ ಒಕ್ಕೂಟದ ಆಶ್ರಯದಲ್ಲಿ ಶನಿವಾರ ಆಚರಿಸಲಾಯಿತು.

ಬ್ರಾಹ್ಮಣ ಒಕ್ಕೂಟದ ಕಾರ್ಯದರ್ಶಿ ಡಾ. ಬಿ. ಕೆ. ಸುಂದರ್ ಅವರ‌ ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ಅನೇಕ ಗಣ್ಯರು ಭಾಗವಹಿಸಿ ಗಮನಸೆಳೆದರು.

ನಗರದ ಶ್ರೀ ರಾಘವರ ಪುತ್ಥಳಿಗೆ ನೆರೆದ ಗಣ್ಯರು ಮಾಲಾರ್ಪಣೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಕಾರ್ಯದರ್ಶಿ ಡಾ.ಬಿ.ಕೆ.ಸುಂದರ್ ಅವರು ಮಾತನಾಡಿ, ಬಳ್ಳಾರಿ ರಾಘವರು ಅಂದರೆ ಸಾಕು ಎಲ್ಲರ ಕಣ್ಣ ಮುಂದೆ ಬರುವುದು ಬಳ್ಳಾರಿ. ವಿಶ್ವ ದಿಗ್ಗಜ, ನಾಟ್ಯ ಕಲಾವಿಧ ರಾಘವರು ರಾಜ್ಯವಷ್ಟೇ ಅಲ್ಲ ವಿಶ್ವದ ಗಮನಸೆಳೆದಿದ್ದರು. ಇದರ ಜೊತೆಗೆ ನ್ಯಾಯವಾದಿಗಳಾಗಿ ಸೇವೆ ಸಲ್ಲಿಸಿ ದೇಶದ ಗಮನಸೆಳೆದಿದ್ದರು ಎಂದು‌ ಸ್ಮರಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಪ್ರಮುಖರಾದ ಡಾ. ಶ್ರೀನಾಥ್, ನೇಮಕಲ್ಲು ರಾವ್, ವಿಠಲ್ ದೇಸಾಯಿ, ಮಧುಸೂದನ್,ಪ್ರಹ್ಲಾದ ದೇಸಾಯಿ, ಗಿರಿ,  ಕರಣಂ ನಾಗಭೂಷಣ ರಾವ್ ಸೇರಿದಂತೆ ಒಕ್ಕೂಟದ ಎಲ್ಲ ಪದಾಧಿಕಾರಿಗಳು, ವಿವಿಧ ಗಣ್ಯರು ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!