Saturday, June 25, 2022

Latest Posts

ಬಳ್ಳಾರಿ ವಿಮ್ಸ್ ನಲ್ಲಿ ಅವ್ಯವಸ್ಥೆ: ದುರಸ್ತಿಗೆ ಬಂದಿದೆ ಕೋಲ್ಡ್ ಸ್ಟೋರೇಜ್, ಹೆಣಗಳಿಗೆ ನೆಲವೇ ಗತಿ

ಬಳ್ಳಾರಿ: ವಿಮ್ಸ್ ನ ಆಡಳಿತ ಮಂಡಳಿ ‌ನಿರ್ವಹಣೆ ಕೊರತೆಯಿಂದ ಕೋಲ್ಡ್ ಸ್ಟೋರೇಜ್ ದುರಸ್ತಿಗೆ ಬಂದಿದ್ದು, ಕೊಣೆಯ ನೆಲದ‌ ಮೇಲೆ ಶವಗಳನ್ನು ಹಾಕಲಾಗಿದ್ದು, ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೆಮ್ಮಾರಿ ಕೊರೊನಾ ಹಿನ್ನೆಲೆ ನಾನಾ ಖಾಯಿಲೆಗೆ ತುತ್ತಾಗಿ ಮ್ರತಪಟ್ಟರೂ ಶವಗಳ ಪರೀಕ್ಷೆ ನಡೆಸಿ, ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತಿದೆ. ಒಂದು ವೇಳೆ ವರದಿಯಲ್ಲಿ ಕೊರೋನಾ ಇರುವುದು ದ್ರಢಪಟ್ಟರೆ ಸರ್ಕಾರದ ನಿಯಮದಂತೆ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ಸಂಬಂಧಿಕರಿಗೆ ಶವಗಳನ್ನು ನೀಡೋಲ್ಲ. ನೆಲದ ಮೇಲೆ ಶವಗಳು: ಇಲ್ಲಿನ ವಿಮ್ಸ್‌ ಅದಿಕಾರಿಗಳ ನಿರ್ಲಕ್ಷ್ಯದಿಂದ ಸುಮಾರು ೪ ಶವಗಳನ್ನು ಶವಾಗಾರದ ಕೊಣೆಯ ನೆಲದ‌ ಮೇಲೆ ಹಾಕಲಾಗಿದೆ. ಕೊರೊನಾ ಪರೀಕ್ಷೆ ಗೆ ಸಮಯ ಬೇಕಾಗಲಿದ್ಸು, ವರದಿ ಬರುವ ವರೆಗೂ ಕಾಯಬೇಕಿದೆ. ಇದೆ ನೆಪವನ್ನಿಟ್ಟುಕೊಂಡು ಅಧಿಕಾರಿಗಳು ಶವಗಳನ್ನು ಬೇಕಾಬಿಟ್ಟಿಯಾಗಿ ನೆಲದ ಮೇಲೆ‌ ಹಾಕಿದ್ದಾರೆ. ಲಕ್ಷಾಂತರ ರೂ.ಖರ್ಚು ಮಾಡಿ ಶಾವಾಗಾರ ಕೋಣೆಗೆ ಹವಾನಿಯಂತ್ರಿತ ಮಷಿನ್ ಅಳವಡಿಸಿದ್ದರೂ ನಿರ್ವಹಣೆ ಕೊರತೆಯಿಂದ ಅದು ದುರಸ್ಥಿಗೆ ‌ಬಂದಿದೆ. ಈ ಹಿನ್ನೆಲೆಯಲ್ಲಿ ನೆಲದ ಮೇಲೆ ಹಾಕಲಾಗಿದೆ. ಶವಗಳು ೨೪ ಘಂಟೆ ಬಳಿಕ ವಾಸನೆ ಬರಲಾರಂಭಿಸಲಿದೆ. ಇದು ಗೊತ್ತಿದ್ದರೂ ನೆಲದ ಮೆಲೆ ಹಾಕಿ ಸಂಬಂದಿಕರ ಆಕ್ರೋಶಕ್ಕೆ ಗುರಿಯಾಗಿದೆ. ಕೆಲ ಶವಗಳ ಸಂಬಂಧಿಕರು ಖಾಸಗಿ ಕೋಲ್ಡ್ ಸ್ಟೋರೇಜ್ ಬಾಡಿಗೆ ತಂದು ತಮ್ಮ ಶವಗಳನ್ನು ಇಟ್ಟುಕೊಂಡಿದ್ದಾರೆ. ಆರೋಗ್ಯ ಇಲಾಖೆ ಸಚಿವ ಶ್ರೀರಾಮುಲು ಅವರ ತವರಲ್ಲೇ ಈ ಅವ್ಯವಸ್ಥೆ ಬಟಾ ಬಯಲಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಶವಗಳ ಸಂಬಂದ ಪಟ್ಟ ವಾರಸುದಾರರು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ‌ ಬೆಸತ್ತಿಸ್ದು, ಶವಗಳ ಮುಂದೆ ಕಣ್ಣೀರಿಡುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss