ಬಳ್ಳಾರಿ: ವಿಷಪೂರಿತ ಬಳ್ಳಿಗಳನ್ನು ತಿಂದು 15 ಕುರಿಗಳು ಮೃತಪಟ್ಟ ಘಟನೆ ಜಿಲ್ಲೆಯ ಹೂವಿನಹಡಗಲಿ ತಾಲುಕಿನ ಹೊಳಗುಂದಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಗ್ರಾಮದ ನವಲಿ ಕೊಟ್ರಪ್ಪ ಹಾಗೂ ಬಾರಿಕೇರ್ ಕೊಟ್ರಪ್ಪ ಎನ್ನುವರಿಗೆ ಸೇರಿದ ಕುರಿಗಳು ಎಂದು ಗುರುತಿಸಲಾಗಿದೆ. ತಾಲೂಕಿನ ಸಿದ್ದಲುಂಗೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಕುರಿಗಳು ವಿಷಪೂರಿತ ಬಳ್ಳಿಗಳನ್ನು ತಿಂದು ಸಾವನ್ನಪ್ಪಿವೆ ಎಂದು ಕುರಿಗಾಹಿ ಕೊಟ್ರಪ್ಪ ಅವರು ತಿಳಿಸಿದರು. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಪಶು ವೈದ್ಯಾಧಿಕಾರಿ ಎಂ.ದರ್ಶನ್ ಅವರು ಭೇಟಿ ನೀಡಿ ಪರಿಶೀಲಿಸಿದರು. ಅಶ್ವಸ್ಥಗೊಂಡಿದ್ದ 40ಕ್ಕೂ ಹೆಚ್ಚು ಕುರಿಗಳಿಗೆ ಚಿಕಿತ್ಸೆ ನೀಡಿ ಬದುಕಿಸಿದ್ದಾರೆ. ನಂತರ ಮಾತನಾಡಿದ ಅವರು, ವಿಷಪೂರಿತ ಬಳ್ಳಿಗಳನ್ನು ಸೇವಿಸಿದ ಹಿನ್ನೆಲೆ ಕುರಿಗಳು ಮೃತಪಟ್ಟಿವೆ, ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡಿದ ಹಿನ್ನೆಲೆ ಉಳಿದ 40 ಕುರಿಗಳು ಬದುಕುಳಿದಿವೆ. ಸಂಜೇ ವೇಳೆ ಯಾವುದೇ ಕಾರಣಕ್ಕೂ ಕುರಿಗಳನ್ನು ಮೇಯಿಸಲು ಬಿಡಕೂಡದು, ಕುರಿಗಾಹಿಗಳು ಸಂಜೆಯಾದ ಕೂಡಲೇ ಹಟ್ಟಿಗೆ ಸೇರಿಸಬೇಕು ಎಂದರು.