ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬಳ್ಳಾರಿ| ವೇದಾವತಿ ನದಿಗೆ ಗ್ರಾಮೀಣ ಶಾಸಕ‌ ಬಿ.ನಾಗೇಂದ್ರ ಬಾಗಿನ ಅರ್ಪಣೆ

ಬಳ್ಳಾರಿ: ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಮೋಕಾ ಗ್ರಾಮದಲ್ಲಿ ಶಾಸಕ ಬಿ.ನಾಗೇಂದ್ರ ಅವರು ಶನಿವಾರ ವೇದಾವತಿ‌ ನದಿಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಸಲ್ಲಿಸಿದರು. ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಮ್ಮ ಈ ಭಾಗದ ಜೀವನದಿ ವೇದಾವತಿ‌‌ ನದಿ ಪ್ರಸಕ್ತ‌ ವರ್ಷ ತುಂಬಿ ಹರಿಯುತ್ತಿದ್ದು, ಸಂತಸ ಮೂಡಿಸಿದೆ. ಕಳೆದ‌ ಸುಮಾರು ವರ್ಷಗಳ ಬಳಿಕ ನದಿ‌ ತುಂಬಿ‌ ಹರಿಯುತ್ತಿದ್ದು, ಇದರಿಂದ ನಮ್ಮ ಈ ಭಾಗದ ರೈತರ ಕೊಳವೆ ಭಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ಇದರ ಜೊತೆಗೆ ಈ ಭಾಗದ ಜನರಿಗೆ ಕುಡಿವ‌ ನೀರಿನ ಬವಣೆ ತಪ್ಪಲಿದೆ. ನಮ್ಮ ಜೀವನದಿಗೆ ವಿಶೇಷ ಪುಜೆ ಸಲ್ಲಿಸಿ, ಬಾಗಿನ ಅರ್ಪಿಸಲಾಗಿದೆ ಎಂದರು. ಇದಕ್ಕೂ ಮುನ್ನ ಶಾಸಕರು ಹಾಗೂ ಯುವ ನಾಯಕ, ಸಹೋದರ ಬಿ.ವೆಂಕಟೇಶ್ ಪ್ರಸಾದ್ ಅವರು‌, ಮೋಕಾ ಗ್ರಾಮದಲ್ಲಿ‌ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದರು ಗ್ರಾಮದಲ್ಲಿನ ಶ್ರೀ ಮಹರ್ಷಿ ವಾಲ್ಮೀಕಿ ವಿಗ್ರಹಕ್ಕೆ ಶಾಸಕರು ಮಾಲಾರ್ಪಣೆ ಮಾಡಿ, ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ಸಂಗನಕಲ್ ವಿಜಯಕುಮಾರ್ ಸೇರಿದಂತೆ ಆಪ್ತ ಸಹಾಯಕರು ಇತರರು ಉಪಸ್ಥಿತರಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss