ಬಳ್ಳಾರಿ: ಬೇಡಿದ ವರ ಕೊಡುವ, ಕಲ್ಪತರು ಕಾಮಧೇನು, ಶ್ರೀ ರಾಘವೆಂದ್ರ ಸ್ವಾಮಿಗಳವರ ಮಧ್ಯಾರಾಧನೆಯನ್ನು ನಗರದ ಸತ್ಯನಾರಾಯಣ ಪೇಟೆ ಶ್ರೀ ರಾಘವೇಂದ್ರ ಸ್ವಾಮೀ ಮಠದಲ್ಲಿ ಬುಧವಾರ ಆಚರಿಸಲಾಯಿತು.
ಶ್ರೀಮಠದಲ್ಲಿ ಮಧ್ಯಾರಾಧನೆ ನಿಮಿತ್ತ ಬೆಳಿಗ್ಗೆ ಶ್ರೀಮಠದಲ್ಲಿ ಅಷ್ಟೋತ್ತರ ಪಾರಾಯಣ, ರಾಯರಿಗೆ ವಿಶೇಷ ಅಲಂಕಾರ, ಪಂಚಾಮೃತಾಭಿಷೇಕ, ಹಸ್ತೋದಕ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು. ಸಂದರ್ಭದಲ್ಲಿ ಶ್ರೀಮಠದ ವ್ಯವಸ್ಥಾಪಕ ಗುರುರಾಜಾಚಾರ್ಯ, ಮುಖಂಡರಾದ ಸುರೇಶ್, ರಾಮಮೂರ್ತಿ ಆಚಾರ್, ಡಾ.ಬಿ.ಕೆ.ಸುಂದರ್, ಡಾ.ಶ್ರೀನಾಥ್, ನೆಮಕಲ್ ರಾವ್, ಡಿ.ಗಿರಿ ಸೇರಿದಂತೆ ಇತರರು ಇದ್ದರು.