Wednesday, June 29, 2022

Latest Posts

ಬಳ್ಳಾರಿ| ಹಿಂದಿ ಭಾಷೆ ಹೇರಿಕೆ ಕ್ರಮ ಖಂಡಿಸಿ ಕರ್ನಾಟಕ ಜನಸೈನ್ಯ ಸಂಘಟನೆ ಪ್ರತಿಭಟನೆ

ಬಳ್ಳಾರಿ: ಹಿಂದಿ ಭಾಷೆ ಹೇರಿಕೆ ಕ್ರಮ ಖಂಡಿಸಿ ಇಲ್ಲಿನ ಕರ್ನಾಟಕ ಜನ ಸೈನ್ಯ ಸಂಘಟನೆ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ‌ ಜಮಾಯಿಸಿದ ಸಂಘಟನೆಯ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ವಿವಿಧ‌ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳವರ‌ ಮೂಲಕ ಮನವಿ ಪತ್ರ ರವಾನಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಜನ ಸೈನ್ಯ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಕೆ.ಎರ್ರಿಸ್ವಾಮೀ ಅವರು ಮಾತನಾಡಿ, ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಮೇಲೆ ಹಿಂದಿ ಭಾಷೆ ಹೇರಿಕೆ ಮಾಡಲು‌ ಮುಂದಾದ ಸರ್ಕಾರದ‌ ಕ್ರಮ‌ ಖಂಡನೀಯ. ಸಾವಿರಾರು ವರ್ಷಗಳ ಚರಿತ್ರೆ ಪಾರಂಪರಿಕವಾಗಿ ಇರುವ ಭಾಷೆಗಳು ದಕ್ಷಿಣ ಭಾರತದಲ್ಲಿ ಭಾಷೆಗಳೇ ಇರುವುದು ಹೆಚ್ಚು. ಹಿಂದಿ ಭಾಷೆಯನ್ನು ಸ್ವಾತಂತ್ರ‍್ಯಪೂರ್ವದಿಂದ ಬಂದಂತ ಭಾಷೆ. ನಮ್ಮ ದಕ್ಷಿಣ ಭಾರತದ ಎಲ್ಲ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ತರಗತಿಗಳಲ್ಲಿ ಮಕ್ಕಳ ಮೇಲೆ ಒತ್ತಾಯಪೂರ್ವಕವಾಗಿ ಹಿಂದಿ ಹೇರಿಕೆ ಮಾಡಲು ಮುಂದಾಗಿರುವುದು ಸರಿಯಲ್ಲ. ಉತ್ತರ ಭಾರತದ ಮಕ್ಕಳಿಗೆ ಕೇವಲ ದ್ವಿಭಾಷೆಯಲ್ಲಿ ಶಿಕ್ಷಣ ಕಲಿಕೆಗೆ ಅವಕಾಶ ಕಲ್ಪಿಸಿ, ದಕ್ಷಿಣ ಭಾರತದ ಮಕ್ಕಳಿಗೆ ತ್ರಿಭಾಷಾ ನೀತಿಯನ್ನು ಜಾರಿಗೆ‌‌ ತರುವುದು ಎಷ್ಟರ ಮಟ್ಟಿಗೆ ಸರಿ.‌ ಅದರಲ್ಲೂ ಮಕ್ಕಳ ವಿದ್ಯಾಭ್ಯಾಸದ ಮೇಲೆ ಸರ್ಕಾರ ಒತ್ತಡವನ್ನು ಹಾಕುತ್ತಿರುವುದು ದುರಾದೃಷ್ಟಕರ ಎಂದು‌ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿರುವ ಕೇಂದ್ರೀಯ ಸದನ ಶಿಕ್ಷಣ ಸಂಸ್ಥೆಗಳು, ಸಿಬಿಎಸ್‌ಇ ಮತ್ತು ಐಸಿಎಸ್‌ಇ ಸೇರಿದಂತೆ ನವೋದಯ, ಕಿತ್ತೂರು ರಾಣಿ ಚೆನ್ನಮ್ಮ, ಮುರಾರ್ಜಿ ದೇಸಾಯಿ ವಸತಿ ಶಾಲೆಗಳು ಸೇರಿದಂತೆ ರಾಜ್ಯದ ಸರ್ಕಾರಿ, ಅರೆ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಹ 1 ರಿಂದ 10ನೇ ತರಗತಿಯವರೆಗೆ ಪ್ರಥಮ ಭಾಷೆಯನ್ನು ಕನ್ನಡವನ್ನೇ ಕಲಿಸಲಾಗುತ್ತಿದೆ. 1968ರಲ್ಲಿ ಒಕ್ಕೂಟ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಮಧ್ಯೆ ನಡೆದ ಭಾಷಾ ಒಪ್ಪಂದದ ಬಗ್ಗೆ, ರಾಜ್ಯ ಸರ್ಕಾರವು ತ್ರಿಭಾಷಾ ನೀತಿಯನ್ನು ಈ ದಿನದವರೆಗೂ ಅನುಮೋದಿಸಲ್ಪಟ್ಟಿಲ್ಲವಾದರೂ ಅನವಶ್ಯಕವಾಗಿ ಹಿಂದಿ ಹೇರಿಕೆ ಮಾಡುತ್ತಿರುವ ಕಾರಣವೇನು ಎಂದು‌ ಪ್ರಶ್ನಿಸಿದರು. ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ‌ ಪ್ರಕ್ರೀಯೆಯನ್ನು ಕೈಬಿಡಬೇಕು, ನಿರ್ಲಕ್ಷಿಸಿದರೆ ರಾಜ್ಯಾದ್ಯಂತ ಕರ್ನಾಟಕ ಜನ ಸೈನ್ಯ ಸಂಘಟನೆ ಆಶ್ರಯದಲ್ಲಿ ಹೋರಾಟದ ಸ್ವರೂಪ ಬದಲಾಗಲಿದೆ ಎಂದು‌ ಎಚ್ಚರಿಸಿದರು. ಈ
ಸಂದರ್ಭದಲ್ಲಿ ಸಂಘಟನೆಯ ಮುಂಖಡರಾದ ಚಂಚಯ್ಯ, ಕೆ.ಹೊನ್ನೂರಪ್ಪ ಸೇರಿದಂತೆ ‌ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss