Sunday, August 14, 2022

Latest Posts

ಬಳ್ಳಾರಿ| 61 ವರ್ಷದ ವ್ಯಕ್ತಿಗೆ ಮಹಾಮಾರಿ ಕೊರೊನಾ: ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 19ಕ್ಕೆ ಏರಿಕೆ

ಬಳ್ಳಾರಿ: ನಗರದ ಸತ್ಯನಾರಾಯಣಪೆಟೆ ಬಡಾವಣೆಯ ೬೧ ವಷರ್ಮದ ವ್ಯಕ್ತಿಯೊಬ್ಬರಿಗೆ ಕೊರೋನಾ ಸೊಂಕು ದ್ರಢಪಟ್ಟಿದ್ದು, ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ೧೯ಕ್ಕೆ ಏರಿಕೆಯಾಗಿದೆ. ಕಳೆದ ಎರಡು ದಿನಗಳಿಂದ ಉಸಿರಾಟದ ತೊಂದರೆ, ಕೆಮ್ಮು, ನೆಗಡಿ, ಜ್ವರದಿಂದ ಬಲಳುತ್ತಿದ್ದ ವ್ಯಕ್ತಿ, ನಗರದ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆಸ್ಪತ್ರೆ ವ್ಯದ್ಯರು ಗಂಟಲು ದ್ರವ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಿದ್ದರು. ವರದಿಯಲ್ಲಿ ಪಾಸಟೀವ್ ಎಂದು ದ್ರಢಪಟ್ಟಿದೆ. ಕೂಡಲೇ ವ್ಯಕ್ತಿಯನ್ನು ನಗರದ ಕೊವೀಡ್-೧೯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹ್ರದಯ ರೊಗ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಬೆಂಗಳೂರು ನಗರದಲ್ಲಿ ಚಿಕಿತ್ಸೆ ಪಡೆಸಿದ್ದರು. ಬೆಂಗಳೂರು ನಗರದಿಂದ ವಾಪಸ್ಸಾದ ಬಳಿಕ ಉಸಿರಾಟದ ತೊಂದರೆ, ಕೆಮ್ಮು, ನೆಗಡಿ ಸಮಸ್ಯೆ ಎದುರಾಗಿದೆ. ಚಿಕಿತ್ಸೆಗೆ ದಾಖಲಾದ ವೇಳೆ ತಪಾಸಣೆ ಒಳಪಡಿಸಿದ ಬಳಿಕ ಸೊಂಕು ಇರುವುದ ದ್ರಢಪಟ್ಟಿದೆ. ಸೊಂಕಿತ ವ್ಯಕ್ತಿ ಜೊತೆಗೆ ಸಂಪರ್ಕ ಹೊಂದಿದವರನ್ನು ಕ್ವಾರೆಂಟ್ಯನ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss