Wednesday, August 10, 2022

Latest Posts

ಬಸವಕಲ್ಯಾಣದ ಉಪ ಚುನಾವಣೆಗೆ ನಾನು ಆಕಾಂಕ್ಷಿಯಲ್ಲ: ಬಿ.ವೈ. ವಿಜಯೇಂದ್ರ

ಹೊಸ ದಿಗಂತ ವರದಿ, ಕಲಬುರಗಿ:

ಮುಂಬರುವ ಬಸವಕಲ್ಯಾಣ ಉಪ ಚುನಾವಣೆಗೆ ನಾನು ಅಭ್ಯರ್ಥಿಯಾಗಿ ಇದ್ದಿನಿ ಎನ್ನುವುದು ಸತ್ಯಕ್ಕೆ ದೂರವಾದ ಮಾತು, ನಾನಂತೂ ಆಕಾಂಕ್ಷಿಯಲ್ಲ ಎಂದು ಭಾರತೀಯ ಜನತಾ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಅವರು ಶುಕ್ರವಾರ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಅವರ ಗೃಹದಲ್ಲಿ ಉಪಹಾರಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಕಲ್ಯಾಣ ಕರ್ನಾಟಕದ ಭಾಗಕ್ಕೆ ರಾಜ್ಯ ಉಪಾದ್ಯಕ್ಷ ಆದನಂತರ ಮೊದಲ ಬಾರಿ ಆಗಮಿಸಿದ್ದೇನೆ. ಇದು ನನಗೆ ಸಂತಸದ ವಿಷಯವಾಗಿದೆ ಎಂದರು. ಹಿಂದೆ 15 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದಿತ್ತು, ಆದರಲ್ಲಿ 12ರಲ್ಲಿ ನಾವು ಗೆಲವು ಸಾಧಿಸಿದೇವೆ ಎಂದರು. ಮೊನ್ನೆ ನಡೆದ ಶಿರಾ ಹಾಗೂ ಆರ್ ಆರ್ ಕ್ಷೇತ್ರಗಳಲ್ಲಿಯೂ ಗೆಲವು ಪಡೆದಿದ್ದೇವೆ. ಆದರೆ ಶಿರಾ ಕ್ಷೇತ್ರ ದೊಡ್ಡ ಸವಲಾಗಿತ್ತು, ಕಾಂಗ್ರೆಸ್ ಮತ್ತು ಜೆಡಿಎಸ್ ಜಾತಿ ರಾಜಕಾರಣ ಮಾಡಿ ಜನರನ್ನು ಆಳುತ್ತಿದ್ದರು. ಬಿಜೆಪಿ ಎಲ್ಲ ಸಮುದಾಯಗಳನ್ನು ಒಟ್ಟುಗೂಡಿಸಿ ಒಂದಾಗಿ ಕರೆದುಕೊಂಡು ಹೋಗುವ ಮೂಲಕ ಕಮಲವನ್ನು ಅರಳಿಸಿದ್ದೇವೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆಡಳಿತವೇ ಗೆಲವಿಗೆ ಶ್ರೀರಕ್ಷೆ
ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲವು ಸಾಧಿಸುವುದಕ್ಕೆ ಕೇಂದ್ರದ ನರೇಂದ್ರ ಮೋದಿ ಹಾಗೂ ರಾಜ್ಯ ಬಿ.ಎಸ್.ಯಡಿಯೂರಪ್ಪ ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೇ ಎಂದರು. ನರೇಂದ್ರ ಮೋದಿ ಅವರ ಸಬಕಾ ಸಾತ್ ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ ಎನ್ನುವ ಧ್ಯೇಯದೊಂದಿಗೆ ಹಾಗೂ ಯಡಿಯೂರಪ್ಪ,ನವರ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎನ್ನುವ ಮಂತ್ರದೊಂದಿಗೆ ಬಿಜೆಪಿ ಅಧಿಕಾರ ನಡೆಸುತ್ತಾ ಬಂದಿರುವ ಕಾರಣಕ್ಕೆ ಇಂದು ಬಿಜೆಪಿ ಗೆಲವು ಸಾಧಿಸಿದೆ ಎಂದರು.
ರಾಜ್ಯದಲ್ಲಿ ಮುಂಬರುವ ಮಸ್ಕಿ ಹಾಗೂ ಬಸವಕಲ್ಯಾಣ ಉಪ ಚುನಾವಣೆಗಳು ಸವಾಲಾಗಿ ಸ್ವೀಕರಿಸಲಾಗುವುದು. ಈ ನಿಮಿತ್ತ ಬಸವಕಲ್ಯಾಣ ಕ್ಷೇತ್ರದ ಪ್ರಮುಖರ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದೇನೆ ಎಂದ ಅವರು, ಪಕ್ಷ ಹಾಗೂ ನಮ್ಮ ರಾಜ್ಯಾದ್ಯಕ್ಷರಾದ ನಳಿನ ಕುಮಾರ ಕಟೀಲ ಅವರು ಕೊಟ್ಟಂತಹ ಜವಾಬ್ದಾರಿಯನ್ನು ನಾನು ನಿಭಾಯುಸತ್ತೇನೆ ಎಂದರು. ಬಸವಕಲ್ಯಾಣ ಕ್ಷೇತ್ರ ಉಪ ಚುನಾವಣೆಯಲ್ಲಿ ನಾನಂತೂ ಆಕಾಂಕ್ಷಿಯಿಲ್ಲ, ಪಕ್ಷದ ಹೈಕಮಾಂಡ್ ನಿರ್ಣವನ್ನು ಪಾಲಿಸಿ, ಪಕ್ಷವು ನೀಡಿದ ಕೆಲಸವನ್ನು ಮಾಡುತ್ತೇವೆ ಎಂದರು.
ಇತ್ತಿಚೇಗೆ ನಡೆದ ಶಿರಾ ಹಾಗೂ ರಾಜರಾಜೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿಲ್ಲ, ಆದರೆ ಆಮಿಷವೊಡ್ಡಿದರೇ ಯಾವ ಮತದಾರರು ಬೆಂಬಲ ನೀಡುವುದಿಲ್ಲ ಎಂದು ಹೇಳಿ ಪರೋಕ್ಷವಾಗಿ ಸಿದ್ದರಾಮಯ್ಯನವರಿಗೆ ತೀರಗೇಟು ನೀಡಿದರು. ಶಿರಾದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ವೈಫಲ್ಯಗಳನ್ನು ಎತ್ತಿ ತೋರಿಸಿದೇವೆ. ಹಾಗಯೇ ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಭಿವೃದ್ಧಿ ಸಾಧನೆಗಳನ್ನು ಎತ್ತಿ ತೋರಿಸಿದ್ದ ಪರಿಣಾಮ ಜನರು ಆಲೋಚನೆಯನ್ನು ತೀರ್ಪನ್ನು ಬಿಜೆಪಿ ಪರವಾಗಿ ನೀಡಿದ್ದಾರೆ ಎಂದರು. ಎಲ್ಲಿಯೂ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಸೋಲಿನ ಹತಾಶೆಯಿಂದ ಸಿದ್ದರಾಮಯ್ಯ ಹೀಗೆ ಮಾತನಾಡಿದ್ದಾರೆ ಎಂದರು.
ಸಂಸದ ಡಾ. ಉಮೇಶ ಜಾಧವ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ವಿಧಾನ ಸಭೆ ಸದಸ್ಯರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೂಡ, ಸುಬಾಷ ಗುತ್ತೇದಾರ, ಬಾಬುರಾವ ಚಿಂಚನಸೂರ, ಬಿಜೆಪಿ ನಗರ ಅಧ್ಯಕ್ಷ ಸಿದ್ದಾಜೀ ಪಾಟೀಲ, ಗ್ರಾಮಾಂತರ ಅಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಗಿ, ಯುವ ಮುಖಂಡ ಚಂದ್ರಕಾಂತ ಪಾಟೀಲ, ನಗರ ಪ್ರಧಾನ ಕಾರ್ಯದರ್ಶಿ ಉಮೇಶ ಪಾಟೀಲ ಸೇರಿದಂತೆ ಹಲವಾರು ಮುಖಂಡರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss