Monday, July 4, 2022

Latest Posts

ಬಸವ ಕಲ್ಯಾಣ ಕ್ಷೇತ್ರದ ಟಿಕೆಟ್ ಗೆ ಪಕ್ಷದ ನಿಧಾ೯ರವೇ ಅಂತಿಮ: ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ

ಹೊಸ ದಿಗಂತ ವರದಿ, ಕಲಬುರಗಿ:

ಮುಂಬರುವ ಬಸವ ಕಲ್ಯಾಣ ಉಪ ಚುನಾವಣೆಗೆ ಯಾರಿಗೆ ಟಿಕೆಟ್ ನೀಡಬೇಕೆನ್ನುವುದು ಪಕ್ಷ ನಿಧ೯ರಿಸುತ್ತದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹೇಳಿದರು.
ಅವರು ಶುಕ್ರವಾರ ನಗರದಲ್ಲಿ ಶಿವಾಚಾರ್ಯ ರ ಸಭೆಯಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲೆಡೆಯೂ ಮುಖ್ಯಮಂತ್ರಿ ಮಗನೆಂದು ಪ್ರೀತಿ ತೋರುತ್ತಿದ್ದು, ಈ ಪ್ರೀತಿಗೆ ನಾನು ಸದಾ ಚಿರರುಣಿಯಾಗಿರುವೆ ಎಂದರು.
ಶಿವಮೊಗ್ಗ ಜಿಲೆಟಿನ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮಂಗಳೂರು ಮತ್ತು ಬೆಂಗಳೂರಿನಿಂದ ಬಾಂಬ್ ಸ್ಕಾಡ್ ಬರುತ್ತಿದೆ. ಈಗಾಗಲೇ ಇಬ್ಬರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಇದೆ. ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ನನಗೆ ಯಾವ ಮಾಹಿತಿ ಇಲ್ಲ. ತನಿಖೆ ನಂತರವೆ ಇದರ ಬಗ್ಗೆ ಸ್ಪಷ್ಟತೆ ತಿಳಿಯಲಿದೆ ಎಂದರು.
ಕಲ್ಯಾಣ ಕನಾ೯ಟಕಕ್ಕೆ ಸಚಿವ ಸಂಪುಟದಲ್ಲಿ ಸೇರಿಸುವ ಮನಸ್ಸು ಮುಖ್ಯಮಂತ್ರಿ ಗಳಿಗೆ ಇದೆ. ಆದರೆ ಅನಿವಾರ್ಯ ಸ್ಥಿತಿಯಲ್ಲಿ ಸಕಾ೯ರ ಅಸ್ತಿತ್ವಕ್ಕೆ ಬಂದಿದೆ. ಹೀಗಾಗಿ ಎಲ್ಲರಿಗೂ ಪ್ರಾತಿನಿಧ್ಯ ನೀಡಲು ಆಗುತ್ತಿಲ್ಲ ಎಂದರು.
ಕ್ಯಾಬಿನೆಟ್ ಗೆ ಕೆಲವರು ಗೈರು ಹಾಜರಿದ್ದರು, ಸಿಎಂ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಾರೆ. ವ್ಯಯಕ್ತೀಕ ಕಾರಣಗಳಿಂದ ಕೆಲವರು ಕ್ಯಾಬಿನೆಟ್ ಗೆ ಬಂದಿಲ್ಲ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss