ಹೊಸ ದಿಂಗತ ಆನ್ ಲೈನ್ ಡೆಸ್ಕ್:
ಬಸ್ಗಳಲ್ಲಿ ಪ್ರಯಾಣ ಮಾಡುತ್ತಿರುವಾಗ ದಿಢೀರ್ ಬೆಂಕಿ ಕಾಣಿಸಿಕೊಂಡ ಸಂದರ್ಭಗಳಲ್ಲಿ ಅವುಗಳನ್ನು ನಿಗ್ರಹಿಸಲು ಡಿಆರ್ಡಿಒ ಹೊಸ ತಂತ್ರಜ್ಞಾನ ಕಂಡು ಹಿಡಿದ್ದಿದ್ದು, ಅದಕ್ಕಾಗಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತೀಶ್ ಗಡ್ಕರಿ ಅಭಿನಂದನೆ ಸಲ್ಲಿಸಿದ್ದಾರೆ.
ಡಿಫೆನ್ಸ್ ರಿಸರ್ಚ್ ಹಾಗೂ ಡೆವೆಲೆಪ್ಮೆಂಟ್ ಆರ್ಗನೈಸೇಷನ್(ಡಿಆರ್ಡಿಒ) ಹೊಸ ತಂತ್ರಜ್ಞಾನ ಪ್ರಕಾರ ಬಸ್ಗಳಲ್ಲಿ ಕಾಣಿಸಿಕೊಳ್ಳುವ ಬೆಂಕಿಯನ್ನು ಕೇವಲ 30 ಸೆಕೆಂಡುಗಳಲ್ಲಿ ಪತ್ತೆ ಹಚ್ಚಿ 60 ಸೆಕೆಂಡುಗಳಲ್ಲಿ ನಿಗ್ರಹಿಸುತ್ತದೆ. ಈ ವಿಶಿಷ್ಟ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಕ್ಕಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಒ) ತಂಡವನ್ನ ಅಭಿನಂದಿಸಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಇದರ ವೀಕ್ಷಣೆ ಮಾಡಿರುವ ನಿತಿನ್ ಗಡ್ಕರಿ ತದನಂತರ ಟ್ವೀಟ್ ಮಾಡಿದ್ದಾರೆ.
ಮಾನವರ ಜೀವನ ರಕ್ಷಣೆ ಮಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿರುವ ಗಡ್ಕರಿ, ನಮಗೆ ಪ್ರತಿಯೊಬ್ಬ ಭಾರತೀಯನ ಜೀವನವೂ ಮುಖ್ಯವಾಗಿದ. ಪ್ರಮುಖವಾಗಿ ಬಸ್ಗಳಲ್ಲಿ, ಅದರಲ್ಲೂ ವಿಶೇಷವಾಗಿ ಶಾಲಾ ಬಸ್ಗಳಲ್ಲಿ ಪ್ರಯಾಣಿಸುತ್ತಿದ್ದಾಗ ಸಂಭವಿಸುವ ಅವಘಡ ತಪ್ಪಿಸಲು ಈ ತಂತ್ರಜ್ಞಾನ ತುಂಬಾ ಸಹಕಾರಿಯಾಗಿದೆ ಎಂದಿದ್ದಾರೆ.
DRDO has developed a unique technology which detects fire in a passenger bus within 30 seconds and suppresses it within 60 seconds. Observed its demonstration along with Hon’ble Raksha Mantri Shri @rajnathsingh Ji. pic.twitter.com/GoOFLY7TlV
— Nitin Gadkari (@nitin_gadkari) November 9, 2020