Monday, July 4, 2022

Latest Posts

ಬಹುಬೇಡಿಕೆಯ ಅಮೃತ ಬಳ್ಳಿ ಆರೋಗ್ಯಕರ ಉಪಯೋಗ

ಅಮೃತಬಳ್ಳಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅದರಲ್ಲೂ ಈ ಕೊರೋನಾ ಸಮಯದಲ್ಲಂತೂ ಬಹು ಬೇಡಿಕೆ ಇತ್ತು ಅಮೃತಬಳ್ಳಿಗೆ. ಇರದ ಪ್ರತಿಯೊಂದು ಭಾಗವೂ ಉಪಯೋಗಕಾರಿಯೇ ಆಗಿದೆ. ಇದನ್ನು ಎಲ್ಲಿ ಬೇಕೆಂದರಲ್ಲಿ ಮಾಡಿಕೊಳ್ಳಬಹುದು. ಮನೆಯ ಮುಂದೆಯೇ ಹಬ್ಬಿಸಬಹುದು. ಇಲ್ಲಿದೆ ಅಮೃತಬಳ್ಳಿ ಉಪಯೋಗ.

ಮಧುಮೇಹ:
ಮಧುಮೇಹ ಸಮಸ್ಯೆಯಿಂದ ಒದ್ದಾಡುತ್ತಿದ್ದವರು ಅಮೃತ ಬಳ್ಳಿಯ ಜ್ಯೂಸ್‌ನ್ನು ಮಾಡಿಕೊಂಡು ದಿನವೂ ಸೇವಿಸಬೇಕು. ಅಮೃತಬಳ್ಳಿಯಲ್ಲಿರುವ ಕಹಿ ಅಂಶ ಮಧುಮೇಹ ನಿವಾರಣೆಗೆ ಒಳ್ಳೆಯದು.

ಬಾಣಂತಿಯರಿಗೆ:
ಬಾಣಂತಿಯರಿಗೆ ಎದೆ ಹಾಲು ಶುದ್ಧಿಯಾಗಲು ಅಮೃತಬಳ್ಳಿಯನ್ನು ಕುಟ್ಟಿ ಪುಡಿ ಮಾಡಿ ಅದಕ್ಕೆ ಶುಂಠಿ ಸೇರಿಸಿ ಕಷಾಯ ತಯಾರಿಸಬೇಕು. ಇದನ್ನು ದಿನವೂ ಒಂದು ವಾರದ ತನಕ ಕುಡಿದರೆ ಎದೆ ಹಾಲು ಶುದ್ಧಿಯಾಗುತ್ತದೆ.

ಜಂತು:
ಜಂತು ಹುಳು ನಿವಾಣೆಗೆ ಅಮೃತಬಳ್ಳಿ ರಾಮಬಾಣ. ಅಮೃತ ಬಳ್ಳಿ ರಸವನ್ನು ಆಗಾಗ ಸೇವಿಸಿದರೆ ಜಂತು ಹುಳು ನಿವಾರಣೆಯಾಗುತ್ತದೆ.

ಜ್ವರ, ನೆಗಡಿ
ಜ್ವರ, ನೆಗಡಿಯಾದರೆ ಅಮೃತಬಳ್ಳಿ, ಕುತ್ತುಂಬರಿ, ತುಳಸಿ ಎಲೆಯನ್ನು ಹಾಕಿ ನೀರಿನಲ್ಲಿ ಕುದಿಸಿ ಅದನ್ನು ಕಷಾಯ ಮಾಡಿಕೊಂಡು ಕುಡಿದರೆ ಜ್ವರ ಕಡಿಮೆ ಆಗುತ್ತದೆ.

ವಾಂತಿ:
ವಾಂತಿಯಾಗುತ್ತಿದ್ದರೆ, ಅಮೃತಬಳ್ಳಿಯ ರಸವನ್ನು ಒಂದು ಚಮಚ ಆಗುವಷ್ಟು ತೆಗೆದು, ಅದಕ್ಕೆ ಜೇನು ತುಪ್ಪವನ್ನು ಸೇರಿಸಿಕೊಂಡು ಸೇವಿಸದರೆ ತಕ್ಷಣ ವಾಂತಿ ನಿಲ್ಲುತ್ತದೆ.

ಕಜ್ಜಿ, ತುರಿಕೆ:
ಕಜ್ಜಿ, ತುರಿಕೆ ಸಮಸ್ಯೆಗಳಿದ್ದರೆ ಅಮೃತಬಳ್ಳಿಯನ್ನು ಚೆನ್ನಾಗಿ ಕೊಬ್ಬರಿ ಎಣ್ಣೆಯೊಂದಿಗೆ ಕುದಿಸಿ. ಅದನ್ನು ತುರಿಕೆಯಾದಾಗ, ಕಜ್ಜಿಗಳು ಆದಾಗ ಹಚ್ಚಿಕೊಳ್ಳಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss