ಬಳ್ಳಾರಿ: ಗಾನಲೊಕದ ದಿಗ್ಗಜ, ಬಹುಭಾಷಾ ಗಾನ ಕೋಗಿಲೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ನಿಧನ ಹಿನ್ನೆಲೆ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಸಂತಾಪ ಸೂಚಿಸಿದ್ದಾರೆ.
ಭಾರತ ಸಂಗೀತ ಲೋಕದ ವಾರಸದಾರ, ಎಸ್.ಪಿ.ಬಾಲಸುಬ್ರಮಣ್ಯಂ ಇನ್ನಿಲ್ಲ ಎನ್ನುವ ಸುದ್ದಿ ನಿಜಕ್ಕೂ ಆಘಾತವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ದುಃಖವನ್ನು ಬರಿಸುವ ಶಕ್ತಿ ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಬಹುಭಾಷಾ ಗಾನ ಕೊಗೊಲೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಸುಮಾರು 40 ಸಾವಿರ ಹಾಡುಗಳನ್ನು ಹಾಡಿ ಚಿತ್ರಂಗದಲ್ಲೇ ದಾಖಲೆ ಬರೆದಿದ್ದಾರೆ. ಅವರ ಕುಟುಂಬದ ವರ್ಗದವರಿಗೆ ಹಾಗೂ ದೇಶದ ಕೊಟ್ಯಾಂತರ ಅಭಿಮಾನ ಬಳಗಕ್ಕೆ ದುಖಃ ಭರಿಸುವ ಶಕ್ತಿ ಭಗವಂತ ಕಲ್ಪಿಸಲಿ ಎಂದು ಪ್ರಾರ್ಥಿಸಿದ್ದಾರೆ.