ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಜಾಗತಿಕ ಮಟ್ಟದಲ್ಲಿ ಎಲ್ಲರನ್ನೂ ಇನ್ನಿಲ್ಲದಂತೆ ಕಾಡುತ್ತಿರುವ ಕೊರೋನಾ ವೈರಸ್ಗೆ ಹಾಲಿವುಡ್ ತತ್ತರಿಸಿಹೋಗಿದೆ.
ಭಾರೀ ಬಜೆಟ್ನಲ್ಲಿ ನಿರ್ಮಿಸಿರುವ ತಮ್ಮ ಸಿನೆಮಾಗಳ ಬಿಡುಗಡೆಯನ್ನು ಅದು 2021ಕ್ಕೆ ಮುಂದೂಡಿದೆ. ಹೀಗೆ ಮುಂದೂಡಲಾಗಿರುವ ಸಿನೆಮಾಗಳ ಪಟ್ಟಿಯಲ್ಲಿ ಬಾಂಡ್ ಸಿನಿಮಾ ಕೂಡಾ ಸೇರಿದೆ!
ಟ್ರೇಲರ್ನಲ್ಲಿಯೇ ಭಾರೀ ಸದ್ದು ಮಾಡಿರುವ ಬಾಂಡ್ ಸಿನಿಮಾ ’ನೋ ಟೈಮ್ ಟು ಡೈ’ಯ ಬಿಡುಗಡೆ ದಿನಾಂಕವನ್ನು ಜುಲೈ ೨೧ಕ್ಕೆ ಮುಂದೂಡಲಾಗಿದೆ. ನ.6ಕ್ಕೆ ಬಿಡುಗಡೆಯಾಗಬೇಕಿದ್ದ ಸ್ಕಾರ್ಲೆಟ್ ಜಾನ್ಸನ್ ಅಭಿನಯದ ’ಬ್ಲ್ಯಾಕ್ ವಿಡೊ’ ಸಿನಿಮಾ ಮುಂದಿನ ಮೇ 7ಕ್ಕೆ ಮುಂದೂಡಲಾಗಿದೆ. ಹಾರರ್ ಸಿನಿಮಾ ’ಕಾಂಜರಿಂಗ್; ದಿ ಡೆವಿಲ್ ಮೇಡ್ ಮೀ ಟು ಡೂ ಇಟ್’ ಕೂಡಾ ಜೂ.4ಕ್ಕೆ ಬಿಡುಗಡೆ ಕಾಣಲಿದೆ. ಇದಲ್ಲದೆ ಗಾಡ್ಜಿಲ್ಲಾ ಕಿಂಗ್ ಕಾಂಗ್, ಮಿಷನ್ ಇಂಪಾಸಿಬಲ್, ಮ್ಯಾಟ್ರಿಕ್ಸ್ 4, ದಿ ಎಟರ್ನಲ್ಸ್ ಸಹಿತ ಹಲವು ಭಾರೀ ಬಜೆಟ್ನ ಸಿನಿಮಾಗಳನ್ನು ನೋಡಿ ಆನಂದಿಸಬೇಕಾದರೆ ನೀವು 2021ರ ತನಕ ಕಾಯಲೇ ಬೇಕು!