Saturday, January 23, 2021

Latest Posts

ಬಾಂಬೆ ಗೂಂಡಾಗಿರಿಯ ಕುರಿತು ಅನ್ಸಾರಿ ಹೇಳಿಕೆ ಸಾಬೀತಾದರೆ ರಾಜಕೀಯ ನಿವೃತ್ತಿ: ಶಾಸಕ ಪರಣ್ಣ ಮುನವಳ್ಳಿ

ಕೊಪ್ಪಳ:  ನಗರಸಭೆ ಚುನಾವಣೆ ಎದುರಿಸಲು ನಾವು ಬಾಂಬೆಯಿಂದ ಬಾಡಿಗೆ ಗೂಂಡಾಗಳನ್ನು ಕರೆಯಿಸಿದ್ದೇವೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರು ಆರೋಪವನ್ನು ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಸಾಬೀತು ಪಡಿಸದಿದ್ದರೆ ಅವರೇ ನಿವೃತ್ತಿ ಪಡೆಯಬೇಕು. ತಾಕತ್ತಿದ್ದರೆ ಸವಾಲು ಸ್ವೀಕರಿಸಲಿ ಎಂದು ಶಾಸಕ ಪರಣ್ಣ ಮುನವಳ್ಳಿ ಸವಾಲೆಸೆದರು.
ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನ್ಸಾರಿಯವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿಯ ಹಾಲಿ ಶಾಸಕ ಪರಣ್ಣ ಮುನವಳ್ಳಿ, ನೇರ ಸವಾಲು ಹಾಕಿ ಮಾಜಿ ಸಚಿವರಿಗೆ ಪಂಥ್ವಾಹನ ನೀಡಿದರು.
ರಾಜಕೀಯವಾಗಿ ನನಗೆ ಬಾಂಬೆಯ ಯಾವೊಬ್ಬ ವ್ಯಕ್ತಿ ಗೊತ್ತಿಲ್ಲ. ಕೇವಲ ವ್ಯವಹಾರಿಕವಾಗಿ ಮಾತ್ರ ಗೊತ್ತು. ಬಹುಶಃ ಬಾಂಬೆಯ ಎಲ್ಲಾ ಚಟುವಟಿಕೆಗಳು ಅವರಿಗೆ ಗೊತ್ತಿರಬೇಕು. ಅದಕ್ಕೆ ಬಾಂಬೆ ಉದಾಹರಿಸಿದ್ದಾರೆ ಎಂದು ಹೇಳಿದರು.
ಗಡಿಪಾರಾದವರನ್ನು ಬಿಜೆಪಿಗರು ಬೆಳೆಸುತ್ತಿದ್ದಾರೆ ಎಂಬ ಮಾಜಿ ಸಚಿವ ಅನ್ಸಾರಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಗಡಿಪಾರಾದವರು, ನಕ್ಸಲೈಟ್ ಪ್ರಕರಣದಲ್ಲಿದ್ದವರನ್ನು ಇವರು ಬೆಳೆಸುತ್ತಿಲ್ಲವೇ ಎಂದು ಪರೋಕ್ಷವಾಗಿ ಸೈಯದ್ ಅಲಿಗೆ ಟಾಂಗ್ ನೀಡಿದರು.
ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ . ಚುನಾವಣೆಯಲ್ಲಿ ಸೋತ ನಂತರ ಅನ್ಸಾರಿ ಗೆ ಈಗ ಎಚ್ಚರವಾಗಿದೆ . ನಗರಸಭೆಯಲ್ಲಿ ಪಕ್ಷೇತರ ಮತ್ತು ಜೆಡಿಎಸ್ ಸದಸ್ಯರ ಸಹಕಾರದಲ್ಲಿ ಆಡಳಿತ ಬಿಜೆಪಿಗೆ ದೊರಕಲಿದೆ . ಮಾಜಿ ಸಚಿವರು ಮಾಡಿರುವ ಎಲ್ಲಾ ಆರೋಪಗಳು ಸುಳ್ಳು . ಇಕ್ಬಾಲ್ ಅನ್ಸಾರಿ ಶಾಸಕರಾಗಿದ್ದ ಅವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ . ಸ್ವಾರ್ಥ ಜಾತಿ ರಾಜಕೀಯ ಹೆಚ್ಚಾಗಿತ್ತು ಇದಕ್ಕೆ ಕ್ಷೇತ್ರದ ಜನರು ಅನ್ಸಾರಿ ಗೆ ಬುದ್ದಿ ಕಲಿಸಿದರೂ ಬುದ್ದಿ ಬಂದಿಲ್ಲ ಎಂದರು .
ನಗರಸಭೆ ಅಪಹರಣ ಪ್ರಕರಣಕ್ಕೆ ಯಾರೇ ತಪ್ಪು ಮಾಡಿದರೂ ಪೊಲೀಸ್ ಇಲಾಖೆ ಸೂಕ್ತ ಶಿಕ್ಷೆ ನೀಡಲಿದೆ . ಸಿಎಂ ಹಾಗೂ ಗೃಹ ಸಚಿವರ ಮೇಲೆ ಒತ್ತಡ ಹೇರಿ ಅಪಹರಣ ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ ನಡೆದಿದೆ ಎಂದು ಅನ್ಸಾರಿ ಹೇಳಿಕೆ ನೀಡಿದ್ದು ಸರಿಯಲ್ಲ. ಕಾನೂನು ಎಲ್ಲರಿಗೂ ಒಂದೇ ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗಲಿದೆ ಎಂದರು .

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!