Sunday, January 24, 2021

Latest Posts

ಬಾಂಬ್‌ ಸ್ಫೋಟ: ವಿಶ್ವಸಂಸ್ಥೆಯ ಮೂವರು ಶಾಂತಿಪಾಲಕರ ಸಾವು

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ವಾಹನವೊಂದರಲ್ಲಿ ಬಾಂಬ್‌ ಸ್ಫೋಟಿಸಿದ ಪರಿಣಾಮ ವಿಶ್ವಸಂಸ್ಥೆಯ ಮೂವರು ಶಾಂತಿಪಾಲಕರು ಮೃತಪಟ್ಟಿದ್ದಾರೆ.

ಈ ದುರ್ಘಟನೆ ಮಾಲಿಯ ಟಿಂಬಕ್ಟು ಪ್ರಾಂತ್ಯದಲ್ಲಿ ನಡೆದಿದೆ. ಮೃತಪಟ್ಟ ಮೂವರು ಮೂಲತಃ ಐವರಿ ಕೋಸ್ಟ್‌ನ ನಿವಾಸಿಗಳು ಎಂದು ಗುರುತಿಸಲಾಗಿದೆ.

ಈ ಬಗ್ಗೆ  ಮಿನುಸ್ಮಾ ಮಿಷನ್ ಮಾಹಿತಿ ನೀಡಿದ್ದು,  ಜ.13ರಂದು ಡೌಯೆಂಟ್ಜಾ ಮತ್ತು ಟಿಂಬಕ್ಟುನಲ್ಲಿ ಭದ್ರತಾ ಪಡೆಯು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ವಾಹನವೊಂದರಲ್ಲಿ ಬಾಂಬ್‌ ಸ್ಫೋಟಿಸಿದೆ. ಈ ವೇಳೆ ಬಂದೂಕುಧಾರಿಗಳು ಕೂಡ ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ ಮೂರು ಮಂದಿ ಮೃತಪಟ್ಟಿದ್ದು, 6 ಜನರಿಗೆ ಗಾಯವಾಗಿದೆ ಎಂದು ಹೇಳಿದೆ.

ಘಟನಾ ಸ್ಥಳದಿಂದ ದಾಳಿಕೋರರು ತಕ್ಷಣವೇ ಪರಾರಿಯಾಗಿದ್ದಾರೆ. ಸದ್ಯ ಹೆಲಿಕಾ‍ಪ್ಟರ್‌ ಮೂಲಕ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದೆ.

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!