ಉಡುಪಿ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ಆದಿತ್ಯ ರಾವ್, ಕೃತ್ಯಕ್ಕೂ ಮುಂಚಿತವಾಗಿ ಕಾರ್ಕಳದ ಬಾರ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂಬುದು ವರದಿಯಾಗಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಜ.20 ರಂದು ಸ್ಪೋಟಕವನ್ನು ಇರಿಸಿದ್ದ ಆರೋಪಿ ಆದಿತ್ಯ ರಾವ್ ಬುಧವಾರ ಬೆಂಗಳೂರಿನ ಪೊಲೀಸರ ಎದುರು ತಪ್ಪು ಒಪ್ಪಿಕೊಂಡಿದ್ದನು.
ಜನವರಿ 18ರಂದು ಕಾರ್ಕಳದ ಕಿಂಗ್ಸ್ ಬಾರ್ ನಲ್ಲಿ ಕೆಲಸ ಕೇಳಿಕೊಂಡಾಗ, ಬಾರ್ ನ ಮಾಲಿಕರು ಆಧಾರ್ ಕಾರ್ಡ್ ನೀಡಬೇಕಾಗಿ ಕೇಳಿದಾಗ, ಆಧಾರ್ ಕಾರ್ಡ್ ಮತ್ತು ದೂರವಾಣಿ ಸಂಖ್ಯೆ ನೀಡಿ ಕೆಲಸಕ್ಕೆ ಸೇರಿದ್ದನು ಎಂಬುವ ಮಾಹಿತಿ ತಿಳಿದು ಬಂದಿದೆ.
ಆದಿತ್ಯ ರಾವ್ ನಡೆಸಿದ ಕೃತ್ಯಕ್ಕೆ ಮಂಗಳೂರಿನ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಡಾ. ಪಿ.ಎಸ್. ಹರ್ಷ ಮಾಧ್ಯಮದವರೊಂದಿಗೆ ಹೇಳಿದ್ದಾರೆ.