Wednesday, June 29, 2022

Latest Posts

ಬಾಗಲಕೋಟೆಗೆ ಹೋಗಿಬಂದ 18 ಜನರಿಗೆ ಕ್ವಾರಂಟೈನ್

ಕೊಪ್ಪಳ: ಬಾಗಲಕೋಟೆ ಜಿಲ್ಲೆಯ ಢಾಣಕ ಶಿರೂರು ಗ್ರಾಮಕ್ಕೆ ತೆರಳಿ ಬಂದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ 18 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದ 18 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

ಇಬ್ಬರು ಆಟೋ ಚಾಲಕರು, 8 ಮಕ್ಕಳು ಸೇರಿ ಒಟ್ಟು 18 ಜನರನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಇದೇ ಮೇ 2 ರಂದು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದಿಂದ ಬಾಗಲಕೋಟೆ ಜಿಲ್ಲೆಯ ಢಾಣಕ ಶಿರೂರು ಗ್ರಾಮಕ್ಕೆ ಮದುವೆಗೆ ಎಂದು ತೆರಳಿದ್ದರು. ಢಾಣಕ ಶಿರೂರಿನ ಸೋಂಕಿತ ಗರ್ಭಿಣಿಯ ಮನೆ ಪಕ್ಕದಲ್ಲಿ ಈ ಮದುವೆ ನಡೆದಿತ್ತು.

ಮದುವೆ ಮುಗಿಸಿಕೊಂಡು ಈ 18 ಜನರು ವಾಪಸ್ ಮೇ. 3 ರಂದು ನಿಲೋಗಲ್ ಗ್ರಾಮಕ್ಕೆ ವಾಪಸ್​​ ಆಗಿದ್ದರು. ನಿಲೋಗಲ್ ಗ್ರಾಮಕ್ಕೆ ಹಿಂದುರುಗಿದ ದಿನವೇ ಢಾಣಕ ಶಿರೂರು ಗ್ರಾಮದ ಗರ್ಭಿಣಿಗೆ ಸೋಂಕು ದೃಢವಾಗಿತ್ತು. ನಿಲೋಗಲ್ ಗ್ರಾಮದ ಜನರ ಢಾಣಕ ಶಿರೂರು ಸಂಪರ್ಕದಿಂದ ಜಿಲ್ಲೆಯಲ್ಲಿ ಆತಂಕ ಹೆಚ್ಚಾದಂತಾಗಿದೆ.

ಇದೇ ಮೇ 2 ರಂದು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದಿಂದ ಬಾಗಲಕೋಟೆ ಜಿಲ್ಲೆಯ ಢಾಣಕ ಶಿರೂರು ಗ್ರಾಮಕ್ಕೆ ಮದುವೆಗೆಂದು ಇವರೆಲ್ಲರೂ ಹೋಗಿ ಬಂದಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss