Wednesday, August 10, 2022

Latest Posts

ಬಾಗಲಕೋಟೆಯಲ್ಲಿ ಅದ್ದೂರಿಯಾಗಿ ನಡೆದ ಭವ್ಯ ಸಂಕೀರ್ತನಾ ಯಾತ್ರೆ

ಹೊಸ ದಿಗಂತ ವರದಿ, ಬಾಗಲಕೋಟೆ:

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರಕ್ಕಾಗಿ ದೇಶಾದ್ಯಂತ ನಿಧಿ ಸಮರ್ಪಣಾ ಅಭಿಯಾನ ನಡೆಯುತ್ತಿದ್ದು ಜಿಲ್ಲೆಯಲ್ಲಿ ಜ.15ರಿಂದ ಫೆ.5ರವರೆಗೆ ಆರಂಭವಾಗಲಿದೆ. ಇದರ ಪೂರ್ವಭಾವಿಯಾಗಿ ನಗರದಲ್ಲಿ ಭವ್ಯ ಸಂಕೀರ್ತನಾ ಯಾತ್ರೆ ಅದ್ದೂರಿಯಾಗಿ ಜರುಗಿತು.
ನಗರದ ಚರಂತಿಮಠದ ಶಿವಾನುಭವ ಕಲ್ಯಾಣಮಂಟಪದ ಆವರಣದಲ್ಲಿ ಬುಧವಾರ ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪಗಳನ್ನು ಸಲ್ಲಿಸುವ ಜತೆಗೆ ಗೋ ಮಾತೆಗೆ ಮನ್ನಿಕಟ್ಟಿ ಮಠದ ಪೂಜ್ಯರು, ಮುರನಾಳ ಮಳೇರಾಜೇಂದ್ರ ಸ್ವಾಮೀಜಿಯವರು ಸೇರಿದಂತೆ ಇನ್ನಿತರ ಮಠಾಧೀಶರು, ರಾಮನ ಭಕ್ತರು ಪೂಜೆಯನ್ನು ಸಲ್ಲಿಸುವ ಮೂಲಕ ಭವ್ಯ ಸಂಕೀರ್ತನಾ ಯಾತ್ರೆಗೆ ಸಂಭ್ರಮದ ಚಾಲನೆ ದೊರೆಯಿತು.
ಶಿವಾನುಭವ ಮಂಟಪದಿಂದ ಆರಂಭಗೊಂಡ ಸಂಕೀರ್ತನಾ ಯಾತ್ರೆ ಬಸವೇಶ್ವರ ಕಾಲೇಜ್ ರಸ್ತೆ, ಪಶು ಆಸ್ಪತ್ರೆ, ಟೀಕಿನಮಠ, ಶಾರದಾ ಪ್ರಿಂಟಿಂಗ್ ಪ್ರೆಸ್, ಕುಂಬಾರ ಮಡು, ಭಾವಸಾರ ಗಜಾನನ ಚೌಕ, ಕಪ್ಪಡ ಬಜಾರ, ಪೊಲೀಸ್ ಚೌಕ್, ಟಾಂಗಾ ಸ್ಟ್ಯಾಂಡ್, ಕಿಲ್ಲಾ ಕೊಪ್ಪ ದವಾಖಾನೆ, ಕಿಲ್ಲಾದ ಅಂಬಾಭವಾನಿ ಮಂದಿರ, ಹಳೆ ಪೋಸ್ಟ್, ವಲ್ಲಭಬಾಯಿ ವೃತ್ತ, ಎಂ.ಜಿ.ರಸ್ತೆ ಮೂಲಕ ಬಸವೇಶ್ವರ ಸರ್ಕಲ್ದಲ್ಲಿ ಹಾಯ್ದು ಮರಳಿ ಚರಂತಿಮಠ ಶಿವಾನುಭವ ಕಲ್ಯಾಣಮಂಟಪ ತಲುಪಿ ಸಮಾಪ್ತಿಗೊಂಡಿತು.
ಸಂಕೀರ್ತನಾ ಯಾತ್ರೆಯಲ್ಲಿ ಜೈ ಶ್ರೀರಾಮ ಎಂಬ ಘೋಷಣೆ ಮೊಳಗಿತು. ಶ್ರೀರಾಮ ನಾಮಸ್ಮರಣೆ, ಕೀರ್ತನೆ, ಭಜನೆಗಳು ನಡೆಯಿತು.
ಜ.15ರಿಂದ ಫೆ.5ರವರೆಗೆ ಜಿಲ್ಲೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣಾ ಅಭಿಯಾನ ನಡೆಯಲಿದೆ. ನಗರದ ಪ್ರತಿಯೊಂದು ವಾರ್ಡ್ ನ ಮನೆಗಳಿಗೆ ತೆರಳಿ ನಿಧಿ ಸಂಗ್ರಹ ನಡೆಯಲಿದೆ. 10 ರೂ.ಗಳಿಂದ ನೂರು ರೂ., ಸಾವಿರು, ಎರಡು ಸಾವಿರ, ಹೀಗೆ ತಮ್ಮ ಕೈಲಾದಷ್ಟು ರಾಮಮಂದಿರ ನಿರ್ಮಾಣಕ್ಕೆ ನಿಧಿ ನೀಡಬಹುದು ಎಂದು ಶ್ರೀರಾಮ ನಿಧಿ ಸಮರ್ಪಣಾ ಅಭಿಯಾನದ ಜಿಲ್ಲಾ ಸಂಚಾಲಕ ವಿಜಯ ಸುಲಾಖೆ ಹೇಳಿದರು.
ಮಾಜಿ ಶಾಸಕ ಪಿ.ಎಚ್.ಪೂಜಾರ, ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಸಂಗಣ್ಣ ಕುಪ್ಪಸ್ತ, ಅಶೋಕ ಮುತ್ತಿನಮಠ, ಬಸವರಾಜ ಯಂಕಂಚಿ, ಶಿವು ಮೇಲ್ನಾಡ, ಸಂತೋಷ ಹೋಕ್ರಾಣಿ, ಮೋಹನ್ ದೇಶಪಾಂಡೆ, ಡಾ.ಸಿ.ಎಸ್.ಪಾಟೀಲ, ಅಶೋಕ ಲಿಂಬಾವಳಿ, ಸತ್ಯನಾರಾಯಣ ಹೇಮಾದ್ರಿ, ರವಿ ಧಾಮಜಿ, ದತ್ತು ಲೋನಾರಿ, ಅನಂತ ಮಳಗಿ, ಡಾ.ಫತ್ತೆಪೂರ, ರಾಜು ನಾಯಕ, ಸುರೇಶ ಮಜ್ಜಗಿ, ಮಂಜು ಏಳೆಮ್ಮಿ, ಬಸವರಾಜ ಹೊನ್ನಳ್ಳಿ , ಸೇವಿಕಾ ಸಮಿತಿ ಸದಸ್ಯರು, ನಗರಸಭೆ ಸದಸ್ಯರು,
ಮಹಿಳಾ ಭಜನಾ ಮಂಡಳಿ, ವಿವಿಧ ಸಮಾಜದ ಮುಖಂಡರು, ಹಿಂದೂ ಸಂಘಟನೆಗಳ ಕಾರ್ಯಕರ್ತರು, ಶ್ರೀರಾಮನ ಭಕ್ತರು ಭವ್ಯ ಸಂಕೀರ್ತನಾ ಯಾತ್ರೆಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss