ಬಾಗಲಕೋಟೆ : ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ರಾತ್ರಿಯಿಡಿ ಸುರಿದ ಮಳೆಯು ಬೆಳಗ್ಗೆಯಾದರೂ ಕಡಿಮೆಯಾಗಿಲ್ಲ.
ಕಳೆದ ಎರಡು ದಿನಗಳ ಹಿಂದೆ ಕಿತ್ತು ಹಾಕಿದ ಹಲವಾರು ರೈತರ ಈರುಳ್ಳಿ ನೀರುಪಾಲಾಗಿದ್ದು, ರೈತರು ಕಂಗಾಲಾಗುವಂತೆ ಮಾಡಿದೆ.
ಇನ್ನೂ ಮಳೆಯಿಂದ ದಿನಗೂಲಿ ಕಾರ್ಮಿಕರು ಮಳೆಯಿಂದ ಮನೆ ಬಿಟ್ಟು ಹೊರಬರದಂತೆ ಮಾಡಿತು.
ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ರಕ್ಷಿಸಿಕೊಳ್ಳಲು ಛತ್ರಿಯ ರಕ್ಷಣೆಯ ಮೊರೆ ಹೋಗಿದ್ದರು.