ಬಾಗಲಕೋಟೆ: ಕೊರೊನಾ ವೈರಸ್ ನಿಯಂತ್ರಣ ಕ್ಕಾಗಿ ಸರ್ಕಾರವು ಸಕಲ ಸೌಲಭ್ಯಗಳನ್ನು ನೀಡುತ್ತಿದ್ದು, ಜಿಲ್ಲಾಡಳಿತವು ಸಾಕಷ್ಟು ಮುಂಜಾಗ್ರತಾ ಕ್ರಮಕೈಗೊಂಡಿದ್ದು, ರೋಗಿಗಳ ಮತ್ತು ಶಂಕಿತರ ಚಿಕಿತ್ಸೆ ಸಾಕಷ್ಟು ಪ್ರಮಾಣದಲ್ಲಿ ವೈದ್ಯಕೀಯ ಪರಿಕರಗಳು, ಸಾಮಗ್ರಿಗಳು ಹಾಗೂ ವೈದ್ಯರ ರಕ್ಷಣಾ ಸಾಮಗ್ರಿಗಳು ಸಾಕಷ್ಟು ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಲಭ್ಯವಿದ್ದು, ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 12668 ತ್ರಿಬಲ್ ಲೇಯರ್ ಮಾಸ್ಕ್ ಗಳಿವೆ. ಹೆಚ್ಚುವರಿಯಾಗಿ 70,000 ತ್ರಿಬಲ್ ಲೇಯರ್ ಮಾಸ್ಕ್ ಗಳು ಹಂಚಿಕೆಯಾಗಿದ್ದು, ರಾತ್ರಿ ವೇಳೆಗೆ ಜಿಲ್ಲೆಗೆ ರವಾನೆಯಾಗಲಿವೆ. 10742 ಎನ್ 95 ಮಾಸ್ಕ್ ಗಳಿದ್ದು, ವೈದ್ಯರಿಗೆ ಬೇಕಾಗುವ ರಕ್ಷಾ ಕವಚ (PPE) ಗಳು 3821 ಇವೆ.ರೋಗಿಯ ಮಾದರಿ ಸಂಗ್ರಹಣೆ ಮಾಡುವ VTM ಸಾಧನ 596, ಸ್ವಾಬ್ 596 , 15 ವೆಂಟಿಲೇಟರ್ ಗಳು, ಕೋವಿದ್ ಶಂಕಿತ ರನ್ನು ಆಸ್ಪತ್ರೆಗೆ ಸಾಗಿಸಲು 11 ಪ್ರತ್ಯೇಕ ಅಂಬುಲೆನ್ಸ್ ಗಳು ಲಭ್ಯ ಇವೆ. ಜಿಲ್ಲೆಯಲ್ಲಿ ಒಟ್ಟು 56 ಅಂಬುಲೆನ್ಸ್ ಗಳಿವೆ. 14ಜ್ವರ ತಪಾಸಣೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.3ಕೋವಿಡ್ ಆಸ್ಪತ್ರೆಗಳನ್ನಾಗಿ ಸೃಜಿಸಲಾಗಿದೆ. 104 ಪ್ರತ್ಯೇಕ ಕೊಠಡಿ(ಐಸೊಲೇಷನ್ ) ಗನ್ನಾಗಿ ರೂಪಿಸಲಾಗಿದೆ. ಜಿಲ್ಲಾಡಳಿತ ಕ್ಕೆ ನಿರಂತರವಾಗಿ ಸಲಹೆ ಸೂಚನೆಗಳನ್ನು ನೀಡುತ್ತಿದ್ದೇನೆ. ಜಿಲ್ಲಾಡಳಿವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತದೆ. ಸರ್ಕಾರವು ಎಲ್ಲಾ ನೆರವು ನೀಡುತ್ತಿದೆ. ಸಾರ್ವಜನಿಕರು ಯಾವುದೇ ಆತಂಕಕ್ಕೊಳಗಾಗಬಾರದು. ಸರ್ಕಾರದ ಹಾಗೂ ಜಿಲ್ಲಾಡಳಿತದ ನಿರ್ದೇಶನಗಳನ್ನು ಪಾಲಿಸಿ, ಸಹಕರಿಸಿ ತಮ್ಮ ಮನೆಯಲ್ಲೇ ಇದ್ದರೆ ಕೊರೊನಾ ಅನ್ನು ನಿಯಂತ್ರಿಸಬಹುದು. ಜಿಲ್ಲಾಡಳಿತ ಸಾಕಷ್ಟು ನಿಗಾ ವಹಿಸಿದೆ. ವೈದ್ಯರು, ನರ್ಸ್ ಗಳು, ಪೌರಕಾರ್ಮಿಕರು, ಆಯಾಗಳು, ಪೊಲೀಸರು, ಕಂದಾಯ ಇಲಾಖೆಯ ಅಧಿಕಾರಿಗಳು ತಮ್ಮ ಜೀವದ ಹಂಗನ್ನು ತೊರೆದು ಕೊರೊನಾ ನಿಯಂತ್ರಣ ಕ್ಕಾಗಿ ಅಪರಿಮಿತವಾಗಿ ಶ್ರಮಿಸುತ್ತಿದ್ದಾರೆ. ಸಾರ್ವಜನಿಕರು ತಾವು ತಮ್ಮ ಮನೆಯಲ್ಲೇ ಇದ್ದು ತಮ್ಮ , ತಮ್ಮ ಕುಟುಂಬದ ಹಾಗೂ ಸಮಾಜದ ಆರೋಗ್ಯವನ್ನು ಕಾಪಾಡಿಕೊಂಡು ಕೊರೊನಾವೈರಸ್ ನಿಯಂತ್ರಣ ಮಾಡಲು ಸಹಕರಿಬೇಕು ಎಂದು ಅವರು ಮನವಿ ಮಾಡಿದ್ದಾರೆ.