ಬಾಗಲಕೋಟೆ: ಲಾಕ್ ಡೌನ್ ಸಡಿಲ ಏನೋ ಆಗಿದೆ ಆದರೆ ಹೆಮ್ಮಾರಿ ಕೊರೋನಾಗೆ ಮಾತ್ರ ಸಡಿಲವಾಗಿಲ್ಲ ಎಂಬುದನ್ನು ಬಾಗಲಕೋಟೆ ಜನರು ಮರೆತಿದ್ದಾರೆ. ಏನೂ ಸಿಗುವುದೇ ಇಲ್ಲವೆಂಬಂತೆ ಜನ ಮಾರುಕಟ್ಟೆಗೆ ಗುಂಪು ಗುಂಪಾಗಿ ಲಗ್ಗೆ ಇಟ್ಟಿರುವುದನ್ನು ಅಪಾಯದ ಮುನ್ಸೂಚನೆಯಂತು ಕಾಣುತ್ತಿದೆ.
ಬಾಗಲಕೋಟೆ ನಗರದಲ್ಲಿ ಶುಕ್ರವಾರ ಎಲ್ಲ ಬ್ಯಾರಿಕೇಡ್ ಹಾಗೂ ರಸ್ತೆಗಳನ್ನು ತೆರವುಗೊಳಿಸಿದ ನಂತರ ಶನಿವಾರ ಬೆಳಗ್ಗೆನೇ ಜನ ತಮ್ಮ ಅಂಗಡಿಗಳನ್ನು ಆರಂಭಿಸಿದ್ದಾರೆ. ಆದರೆ ಯಾವುದೇ ಭಯವಿಲ್ಲದ ರೀತಿ ಜನ ಮಾರುಕಟ್ಟೆಯಲ್ಲಿ ಜನ ಸಂಚಾರ ಮಾಡುತ್ತಿದ್ದಾರೆ.
ಬಾಗಲಕೋಟೆ ಮಾರುಕಟ್ಟೆಯಲ್ಲಿ ಸಧ್ಯ ಆರಂಭ ಮಾಡಿರುವ ಎಲ್ಲ ಅಂಗಡಿಗಳ ಮುಂದೆ ಜನ ಮುಗಿಬೀಳುತ್ತಿದ್ದಾರೆ. ಯಾವುದೇ ಸಾಮಾಜಿಕ ಅಂತರವಿಲ್ಲ. ಅಂಗಡಿಗಳಿಗೆ ಬರುವ ಜನರಿಗೆ ಮೊದಲು ಸ್ಯಾನಿಟೈಸರ ನೀಡುತ್ತಿಲ್ಲ. ಇನ್ನೂ ಮಾಸ್ಕ್ ಹಾಕಿಕೊಂಡ ಬನ್ನಿ ಹೇಳುವವರಿಲ್ಲ. ಮಾರುಕಟ್ಟೆ ಆರಂಭವಾಗಿದೆ ವ್ಯಾಪಾರ ಮಾಡಬೇಕು ಎಂದು ಅಷ್ಟೇ ತಿಳಿದುಕೊಂಡಿದ್ದಾರೆ. ಕೊರೋನಾದಿಂದ ಜೀವ ರಕ್ಷಣೆಗೆ ಮುಂಜಾಗೃತಾ ಕ್ರಮಗಳು ಕಾಣಸಿಗಲಿಲ್ಲ.
ಸಧ್ಯ ಬಾಗಲಕೋಟೆ ತರಕಾರಿ ಮಾರುಕಟ್ಟೆ ಒಂದು ಬಿಟ್ಟರೆ, ಸೋಂಕಿತ ವ್ಯಾಪ್ತಿಯ ಪ್ರದೇಶ ಹೊರತುಪಡಿಸಿದರೆ ಬಹುತೇಕ ಬಾಗಲಕೋಟೆ ಮಾರುಕಟ್ಟೆ ಹಿಂದೆ ನಡೆದಂತೆ ಸರಾಗವಾಗಿ ಸಾಗಿದೆ. ಆದರೆ ಜನ ಮಾತ್ರ ತಮ್ಮಜವಾಬ್ದಾರಿಯನ್ನು ಮರೆತು ಮಾರುಕಟ್ಟೆ ಯಲ್ಲಿ ಬಂದಿದ್ದಾರೆ.
ಬಾಗಲಕೋಟೆ ಮಾರುಕಟ್ಟೆಯಲ್ಲಿ ಸಧ್ಯಬೈಕಗಳದೇ ಸದ್ದು. ಅನವಶ್ಯಕವಾಗಿ ಬೈಕುಗಳನ್ನು ತೆಗೆದುಕೊಂಡು ತಿರುಗಾಡುವವರು ಜಾಸ್ತಿ ಇದ್ದಾರೆ. ಇನ್ನೂ ಕಾರುಗಳು ಸಹ ಜನ ಮಾರುಕಟ್ಟೆಗೆ ತೆಗೆದುಕೊಂಡ ಬಂದಿದ್ದರಿಂದ ಮಾರುಕಟ್ಟೆಯಲ್ಲಿ ಜನಜಂಗಳು ಹೆಚ್ಷಾಗಿದ್ದಾರಿಂದ ಫುಲ್ ಟ್ರಾಫಿಕ್ ಜಾಮ್ ಆಗಿದ್ದರಿಂದ ಪೊಲೀಸ್ ಇಲಾಖೆಯವರಿಗೂ ತಲೆನೋವಾಗಿ ಪರಿಣಮಿಸಿತು.
ಬಾಗಲಕೋಟೆ ಮಾರುಕಟ್ಟೆಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ತಮ್ಮಜೀವ ಭಯದಲ್ಲೇ ಕರ್ತವ್ಯ ನಿರ್ವಹಿಸಬೇಕಾಗಿದೆ. ಜನರಿಗೆ ಮಾತ್ರ ಯಾವುದೇ ಭಯವಿಲ್ಲ. ಬಾಗಲಕೋಟೆ ಯಲ್ಲಿಯೇ ಹೆಚ್ಚು ಕೊರೋನಾ ಸೋಂಕಿತರ ಸಂಖ್ಯೆ ಇರುವುದು,ಕೊರೋನಾದಿಂದ ಒಬ್ಬ ಸಾವನ್ನಪ್ಪಿದರು ನಮ್ಮ ಜನರಿಗೆ ಕೊರೋನಾ ಬಗ್ಗೆ ಭಯವಿಲ್ಲದಂತೆ ಮಾರುಕಟ್ಟೆ ಯಲ್ಲಿ ಜನ ವರ್ತಿಸುವುದು ಇಂದಿನ ಸ್ಥಿತಿಯಲ್ಲಿ ಸರಿಯಲ್ಲ.
ಬಾಗಲಕೋಟೆ ಮಾರುಕಟ್ಟೆಗೆ ಬರುವ ಜನ ಕನಿಷ್ಟ ತಮಗೆ ಬೇಕಾದ ವಸ್ತುಗಳನ್ನು ಪಡೆದುಕೊಂಡ ಹೋಗಲು ಒಬ್ಬರು ಬಂದರೆ ಸಾಕಾಗುತ್ತದೆ.ಆದರೆಬೈಕ ಮೇಲೆ ತಮ್ಮಮನೆಯವರು ಕರೆದುಕೊಂಡು ಬರುವುದು ಅವಶ್ಯವಿಲ್ಲವಾದರೂ ಮಾರುಕಟ್ಟೆ ಆರಂಭವಾಗಿದೆ ಯಾವಾಗ ಬಂದ್ ಆಗೋತ್ತೋ ಎಂಬ ಸಂಶಯದಿಂದ ಮುಗಿಬೀಳುತ್ತಿದ್ದಾರೆ. ಹೊಟೇಲ್ ಹೊರತುಪಡಿಸಿದರೆ ಎಲ್ಲ ಅಂಗಡಿಗಳು ಆರಂಭವಾಗಿವೆ.
ಮಾರುಕಟ್ಟೆ ಆರಂಭಕ್ಕೂ ಮುನ್ನ ಅಂಗಡಿಕಾರರು ಕೊರೋನಾ ಬಗ್ಗೆ ಯಾವ್ಯಾವ ರೀತಿ ವ್ಯವಸ್ಥೆ ಇರಬೇಕು.ಜನರ ಅಂತರ ಹೇಗಿರಬೇಕು ಎಂಬೆಲ್ಲ ಮಾಹಿತಿಯನ್ನು ಜಿಲ್ಲಾಡಳಿತ ನೀಡಿದ್ದರೆ ಇಷ್ಟೊಂದು ಜನಜಂಗುಳಿ ಇರುತ್ತಿರಲಿಲ್ಲ.