Tuesday, July 5, 2022

Latest Posts

ಬಾಗಲಕೋಟೆ| ಅನುಮತಿಯಿಲ್ಲದ ಕೀಟನಾಶಕ ಮಾರಾಟ ಮಳಿಗೆ ಮೇಲೆ ಜಾಗೃತ ಕೋಶ ದಾಳಿ

ಬಾಗಲಕೋಟೆ: ಜಿಲ್ಲೆಯಲ್ಲಿ ನೋಂದಾಯಿತವಲ್ಲದ ಕೀಟನಾಶಕ ಮಾರಾಟಗಾರರ ಮೇಲೆ ಜಿಲ್ಲೆಯ ಕೃಷಿ ಇಲಾಖೆಯ ಜಾಗೃತ ಕೋಶದಿಂದ ದಾಳಿ ಮುಂದುವರೆದಿದ್ದು, ಹುನಗುಂದ ತಾಲ್ಲೂಕಿನ ಕೃಷಿ ಪರಿಕರ ಮಾರಾಟಗಾರರ ಮಳಿಗೆ ಮೇಲೆ ದಾಳಿಮಾಡಿ 610 ಲೀಟರ್ ನಷ್ಟು ನೈಟ್ರೊಬೆಂಜಿನ್ ಎಂಬ ರಾಸಾಯನಿಕವನ್ನು ಜಪ್ತುಮಾಡಿ, ವಶಕ್ಕೆ ಪಡೆದುಕೊಳ್ಳಲಾಗಿದೆ.
ಅಂತಹ ಕೃಷಿ ಪರಿಕರ ಮಾರಾಟಗಾರರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಆದ್ದರಿಂದ ರೈತ ಬಾಂಧವರು ಖರೀದಿ ಮಾಡುವ ಮುನ್ನ ಬಾಟಲ್, ಪಾಕೇಟ್ ಮೇಲೆ ಲೇಬಲ್ ಪರಿಶೀಲಿಸಿ ಅಧೀಕೃತ ಮಾರಾಟಗಾರರಿಂದ ಮಾತ್ರ ಖರೀದಿಸಲು ಹಾಗೂ ಖರೀದಿಸಿದ ಪರಿಕರಕ್ಕೆ ಕಡ್ಡಾಯವಾಗಿ ಬಿಲ್ಲುಗಳನ್ನು ಪಡೆದುಕೊಳ್ಳುಲು ಕೋರಿದ್ದಾರೆ. ಜಿಲ್ಲೆಯ ಕೃಷಿ ಪರಿಕರ ಮಾರಾಟಗಾರರು ಯಾವುದೇ ಕಾರಣಕ್ಕೂ ನೋಂದಾಯಿತವಲ್ಲದ ಕೀಟನಾಶಕಗಳನ್ನು ದಾಸ್ತಾನು, ಮಾರಾಟ ಮಾಡದಿರಲು ಜಂಟಿ ಕೃಷಿ ನಿರ್ದೇಶಕರಾದ ಡಾ. ಚೇತನಾ ಪಾಟೀಲ ತಿಳಿಸಿದ್ದಾರೆ.
ಛಾಯಾಚಿತ್ರ ಲಗತ್ತಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss