Thursday, August 11, 2022

Latest Posts

ಬಾಗಲಕೋಟೆ| ಎಪಿಎಂಸಿ ಕಾಯ್ದೆ ಯಾರಿಗೂ ಮಾರಕವಾಗುವುದಿಲ್ಲ : ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ

ಬಾಗಲಕೋಟೆ: ರೈತರ ಆದಾಯವನ್ನು ದ್ವಿಗುಣಗೊಳಿಸಲು ಹಾಗೂ ರೈತರಿಗೆ ತಮ್ಮ ಇಷ್ಟಬಂದಲ್ಲಿ ತಮಗೆ ಲಾಭವಾಗುವ ಕಡೆ ತಾವು ಬೆಳೆದಂತಹ ಬೆಳೆಯನ್ನು ಮಾರಾಟ ಮಾಡಲು ಸರ್ಕಾರ ಕಾಯ್ದೆಯನ್ನು ಜಾರಿಗೆ ಮಾಡಿದೆ.ಇದು ಯಾವುದೇ ರೈತ ವರ್ಗಕ್ಕೆ ಆಗಲಿ,ವರ್ತಕರಿಗೆ ಮಾರಕವಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದರು.
ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು,ಹಿಂದೆ ಮನಹೋಹನ್ ಸಿಂಗ್ ಅವರು ಇದ್ದ ಸಂದರ್ಭದಲ್ಲಿಯೇ ಡಬ್ಲ್ಯೂಟಿಓ ಅಗ್ರೀಮೆಂಟ್ಗೆ ಸಹಿ ಹಾಕಲಾಗಿದೆ.ಈಗ ಕಾಂಗ್ರೆಸ್ನವರು ವಿರೋಧ ಮಾಡುವುದು ಸರಿಯಲ್ಲ.ಅಗ್ರೀಮೆಂಟ್ನ್ನು ಕಾಂಗ್ರೆಸ್ ಮಿತ್ರರರು ಓದಿಕೊಳ್ಳುವುದು ಅವಶ್ಯವಿದೆ.ಎಪಿಎಂಸಿ ಕಾಯ್ದೆಯಿಂದ ರೈತರಿಗೆ ಅನ್ಯಾಯವಾಗಲಿದೆ ಎಂದು ಹೇಳುವ ಕಾಂಗ್ರೆಸ್ನವರ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದು ತಿರುಗೇಟು ನೀಡಿದರು. ಎಪಿಎಂಸಿಯಲ್ಲಿ ವರ್ತಕರಿಗೂ ರೈತರು ತಮ್ಮ ಫಸಲನ್ನು ಮಾರಬಹುದು.ಇಲ್ಲ ಹೊರಗಡೆಯ ಮಾರುಕಟ್ಟೆಯಲ್ಲಿಯೂ ಮಾರಬಹುದು ಇದಲ್ಲದೇ ಜಮೀನಿನಲ್ಲಿಯೇ ಬಂದು ಖರೀದಿ ಮಾಡುವವರಿಗೆ
ತಮಗೆ ದರ ಬಂದರೆ ನೇರವಾಗಿ ಮಾರಾಟ ಮಾಡಲು ಈ ಕಾಯ್ದೆಯಲ್ಲಿ ಅವಕಾಶ ಮಾಡಿಕೊಟ್ಟಿದೆ.ಈ
ಕಾಯ್ದೆಯಿಂದ ರೈತರಿಗೆ ದಲ್ಲಾಳಿಗಳು,ಹಮಾಲಿ,ತೂಕದ ದುಡ್ಡು ಉಳಿಯಲಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಕೋವಿಡ್-19 ಸಂಕಷ್ಟದಲ್ಲಿಯೂ 20 ಲಕ್ಷ ಕೋಟಿಯಷ್ಟು ಹಣವನ್ನು ದೇಶದ ಜನರಿಗಾಗಿ ಬಿಡುಗಡೆ ಮಾಡಿದೆ..ಇದರ ಲಾಭ ದೇಶದ ಪ್ರತಿಯೊಬ್ಬರಿಗೂ ತಟ್ಟಲಿದೆ.ಇನ್ನೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಹ ರಾಜ್ಯದ ಬಡವವರ,ಕಾಮರ್ಿಕ ವರ್ಗದ,ರೈತರ ಅನುಕೂಲಕ್ಕಾಗಿ 2300 ಕೋಟಿಯಷ್ಟು ಪ್ಯಾಕೇಜ್ನ್ನು ಘೋಷಣೆ ಮಾಡುವ ಮೂಲಕ ರಾಜ್ಯದ ಜನರ ಪರ ನಿಂತು ಕೆಲಸ ಮಾಡುತ್ತಿದ್ದಾರೆ ಎಂದರು.
10 ಲಕ್ಷ ರೈತರಿಗೆ ಲಾಭ: ಮೆಕ್ಕೆಜೋಳವನ್ನು ಬೆಳೆದಂತಹ ರೈತರು ಈಗಾಗಲೇ ಮಾರಾಟ ಮಾಡಿವವರಿಗೆ ಬೆಂಬಲ ಬೆಲೆಯಾಗಿ ಅವರಿಗೆ ಪ್ರೋತ್ಸಾಹಧನವೆಂದು ರೂ.5000 ಹಣವನ್ನು ಸರ್ಕಾರ ನೀಡಿದೆ.ರಾಜ್ಯದಲ್ಲಿ ಹತ್ತು ಲಕ್ಷ ರೈತರಿಗೆ ಲಾಭ ತಟ್ಟಿದೆ.ಬಾಗಲಕೋಟೆ ಜಿಲ್ಲೆಯಲ್ಲೇ 61 ಸಾವಿರ ಮೆಕ್ಕೆಜೋಳ ಬೆಳೆದ ರೈತರಿಗೆ ಲಾಭವಾಗಿದೆ ಎಂದರು.
ಅಂತರ ಜಿಲ್ಲಾ,ರಾಜ್ಯಗಳಿಂದ ಕೋವಿಡ್-19 ಸಂಬಂಧ ಜಿಲ್ಲೆಗೆ 30 ಸಾವಿರ ಜನ ಬಂದಿದ್ದಾರೆ.ಇವರೆಲ್ಲರಿಗೂ ಉದ್ಯೋಗ ಕೊಡುವುದು ಸರ್ಕಾರದ ಆದ್ಯತೆಯಾಗಿದೆ.ಈಗಾಗಲೇ ನರೇಗಾ ಅಡಿ ಕೆಲಸ ನೀಡಲು ಕೇಂದ್ರ ಸರ್ಕಾರರ 204 ಕೋಟಿಯಷ್ಟು ಅನುದಾನವನ್ನು ಜಿಲ್ಲೆಗೆ
ನೀಡಿದೆ.42 ಲಕ್ಷ ಮಾನವ ದಿನಗಳನ್ನು ಕೊಡಲು ಸಾಧ್ಯವಿದೆ.ಜಿಲ್ಲೆಯಿಂದ ಯಾರೂ ಹೊರಗಡೆ ದುಡಿಯಲು ಹೋಗದಂತೆ ಕೆಲಸ ದೊರೆಯಲಿದೆ ಎಂದರು.
ನರೇಗಾ ಅಡಿ ಹೊಲಗಳಿಗೆ ಬದು,ಚೆಕ್ಡ್ಯಾಂ,ಶಾಲೆಗಳಿಗೆ ಕಂಪೌಂಡ್,ಶೌಚಾಲಯ,ಕೃಷಿ ಹೊಂಡ,ತಿಪ್ಪೆಗುಂಡಿ,ಅರಣ್ಯ ಬೆಳೆಸಲು ಅವಕಾಶವಿದೆ.ತಮಗೆ ಇಷ್ಟಬಂದ ಕೆಲಸವನ್ನು ನರೇಗಾ ಅಡಿ ಮಾಡಿ ಕೂಲಿಯನ್ನು ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಕೋವಿಡ್19 ಸಂಬಂಧಪಟ್ಟಂತೆ ಜನಧನ್ ಖಾತೆಗೆ ಜಿಲ್ಲೆಯ ಜನರಿಗೆ 45 ಕೋಟಿ ಎರಡು ತಿಂಗಳಿಂದ ರೂ.500ರಂತೆ ಜಮೆ ಆಗಿದೆ.ಇದರ ಲಾಭವನ್ನು 4 ಲಕ್ಷ 50 ಸಾವಿರ ಜನರು ಪಡೆದುಕೊಂಡಿದ್ದಾರೆ.1,30,224 ಕುಟುಂಬಗಳು ಎಲ್ಪಿಜಿ ಸಿಲಿಂಡರ್  ಉಚಿತವಾಗಿ ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ಸಂಸದ ಪಿ.ಸಿ.ಗದ್ದಿಗೌಡರ,ಶಾಸಕ ವೀರಣ್ಣ ಚರಂತಿಮಠ,ಜಿಲ್ಲಾಧಿಕಾರಿ ಕ್ಯಾ.ರಾಜೇಂದ್ರ,ಎಸ್ಪಿ ಲೋಕೇಶ ಜಗಲಾಸಾರ್,ಸಿಇಓ ಮಾನಕರ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss