Thursday, August 11, 2022

Latest Posts

ಬಾಗಲಕೋಟೆ| ಕಷ್ಟದಲ್ಲಿಯೂ ದೇಶದ ಜನರ ಆತ್ಮಸ್ಥೈರ್ಯ ತುಂಬಿದ ಪಿಎಂ ಮೋದಿ: ಶಾಸಕ ಚರಂತಿಮಠ

ಬಾಗಲಕೋಟೆ:ಕೊರೋನಾ ಎಂಬ ಮಹಾ ಹೆಮ್ಮಾರಿಯಿಂದ ದೇಶ ಸಂಕಷ್ಟದಲ್ಲಿದ್ದರೂ ಜನರಲ್ಲಿ ಆತ್ಮಸ್ಥೈರ್ಯ ತುಂಬುವ ಜತೆಗೆ 20 ಲಕ್ಷ ಕೋಟಿಯಷ್ಟು ನೀಡಿರುವ ಪ್ಯಾಕೇಜ್ ಕೇವಲ ಭರವಸೆಯಾಗದೇ ಅನುಷ್ಠಾನಕ್ಕೆ ಬರಲಿದೆ.ಪ್ರಧಾನಿ ನರೇಂದ್ರ ಮೋದಿಯವರು ದೇಶಕ್ಕಾಗಿ ಮಾಡುವ ಯಾವುದೇ ಕೆಲಸ ಹುಸಿಯಾಗುವುದಿಲ್ಲ ಎಂದು ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ದೇಶದಲ್ಲಿ ಆತಂಕವಾದ,ನಕ್ಸಲರ ಅಟ್ಟಹಾಸ ಜತೆಗೆ ಕೊರೋನಾವನ್ನು ನಿಯಂತ್ರಿಸಲು ಹಲವು ಕ್ರಮಗಳನ್ನು ಕೈಗೊಂಡರು.ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡ ಕೆಲಸ ಮಾಡುವ ಪ್ರಧಾನಿಯವರು ಘೋಷಣೆ ಮಾಡಿರುವ ಪ್ಯಾಕೇಜ್ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಪ್ರಧಾನಿಯವರು ಘೋಷಣೆ ಮಾಡಿರುವ ಪ್ಯಾಕೇಜ್ ಮುಂದಿನ ದಿನಗಳಲ್ಲಿ ಮಹತ್ವರ ಬದಲಾವಣೆಯನ್ನು ದೇಶದಲ್ಲಿ ಕಾಣಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೂ ರಾಜ್ಯದಲ್ಲಿಯೂ ಕೂಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೊರೋನಾವನ್ನು ರಾಜ್ಯದಲ್ಲಿ ನಿಯಂತ್ರಿಸಲು ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುವ ಜತೆಗೆ ಕಾರ್ಮಿಕ, ಬಡವರು,ರೈತರು,ನೇಕಾರರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಯಾವುದೇ ತೊಂದರೆಯಾಗದಂತೆ ಮೂರು ಹಂತದ ಪ್ಯಾಕೇಜ್ಗಳನ್ನು ಘೋಷಣೆ ಮಾಡಿದ್ದಾರೆ ಆರ್ಥಿಕ ಸಂಕಷ್ಟದಲ್ಲಿಯೂ ದೇಶದ ಪ್ರಧಾನಿಯವರು ಹಾಗೂ ರಾಜ್ಯದ ಮುಖ್ಯಮಂತ್ರಿಗಳು ಮಾಡಿರುವ ಕೆಲಸಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಲಾಕ್ಡೌನ್ ಪರಿಣಾಮ ಎಲ್ಲ ವರ್ಗದ ಜನ ಆಥರ್ಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡಾ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಹೂ ಬೆಳೆದ ರೈತರಿಗೆ ಗರಿಷ್ಠ ಒಂದು ಹೆಕ್ಟೇರ್ಗೆ 25000 ಪರಿಹಾರ ಧನ ಘೋಷಣೆ ಮಾಡಿದ್ದಾರೆ. ಮಡಿವಾಳ, ಕ್ಷೌರಿಕ ವೃತ್ತಿ ಬಾಂಧವರಿಗೆ, ಚಾಲಕರಿಗೆ 5 ಸಾವಿರ ರೂ. ಪರಿಹಾರ ನೀಡಲಾಗುತ್ತದೆ. ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ದಿಮೆ ವಿದ್ಯುತ್ ಬಿಲ್ ಫಿಕ್ಸಡ್ ಚಾರ್ಜ ಎರಡು ತಿಂಗಳ ಅವ?ಗೆ ಪೂರ್ಣ ಪ್ರಮಾಣದಲ್ಲಿ ಮನ್ನಾ ಮಾಡಲಾಗುತ್ತದೆ. ಅಲ್ಲದೆ ಸಾಮಾನ್ಯ ವಿದ್ಯುತ್ ಗ್ರಾಹಕರಿಗೆ ರಿಯಾತಿ ಘೋಷಣೆ ಮಾಡಿದ್ದಾರೆ. 109 ಕೋಟಿ ರೂ. ಮೊತ್ತದ ನೇಕಾರರ ಸಾಲ ಮನ್ನಾ ಘೋಷಿಸಲಾಗಿದೆ. ನೇಕಾರರ ಸಮ್ಮಾನ ಯೋಜನೆ ಮೂಲಕ 54 ಸಾವಿರ ಕೈಮಗ್ಗ ನೇಕಾರರಿಗೆ ಪ್ರತಿ ವರ್ಷ 2 ಸಾವಿರ ಪ್ರೋತ್ಸಾಹ ಧನ ರಾಜ್ಯ ಸರ್ಕಾರ ನೀಡಲಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss