Tuesday, June 28, 2022

Latest Posts

ಬಾಗಲಕೋಟೆ| ಕೊರೋನಾದಿಂದ 80 ವರ್ಷದ ವೃದ್ಧೆ ಗುಣಮುಖ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ 80 ವರ್ಷದ ವೃದ್ಧೆ ಸೇರಿ ಶನಿವಾರ ಮೂವರು ಕೊರೋನಾದಿಂದ ಗುಣಮುಖವಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಂಡರು.

ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಮಧ್ಯಾಹ್ನದ ವೇಳೆಗೆ ಗುಣ ಮುಖರಾದವರ ಸಂಖ್ಯೆ 66ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಮಾದ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

ಡಾಣಕಶಿರೂರ ಗ್ರಾಮದ 80 ವರ್ಷದ ವೃದ್ದೆ ಪಿ.703, ಮುಧೋಳನ 19 ವರ್ಷದ ಯುವಕ ಪಿ.898, ಕುಳಗೇರಿ ಕ್ರಾಸನ 33 ವರ್ಷದ ಪುರುಷ ಪಿ.1063 ಕೋವಿಡನಿಂದ ಗುಣಮುರಾಗಿದ್ದಾರೆ‌.

ಗುಣಮುಖರಾದವರಿಗೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಪ್ರಮಾಣ ಪತ್ರ ವಿತರಣೆ ಮಾಡಿ ಚಪ್ಪಾಳೆ ತಟ್ಟುವ ಮೂಲಕ ಕೋವಿಡ್ ದಿಂದ ಗುಣಮುಖರಾದವರನ್ನು ಮನೆಗೆ ಬೀಳ್ಕೊಡುಗೆ ನೀಡಲಾಯಿತು.

ಕೊರೋನಾದಿಂದ‌ ಗುಣಮುಖವಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ ವೃದ್ಧೆ ಆಸ್ಪತ್ರೆಯಲ್ಲಿ ಒಳ್ಳೆಯ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಿದ್ದಾರೆ ಎಂದು ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss