Latest Posts

ಕಾಸರಗೋಡು| ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿಯಿಂದ ಗೌರವ

ಕಾಸರಗೋಡು: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಕರಸೇವೆಗಾಗಿ ತೆರಳಿದ್ದ  ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕುಟುಂಬ ಪ್ರಬೋಧನ್ ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರ ಮನೆಗೆ ತೆರಳಿ ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 149 ಪಾಸಿಟಿವ್ ಪ್ರಕರಣ ದೃಢ, 82 ಮಂದಿ ಗುಣಮುಖ, 10 ಬಲಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಕೊರೋನಾಗೆ 10 ಮಂದಿ ಬಲಿಯಾಗಿದ್ದು, 149 ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. 82 ಮಂದಿ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬುಧವಾರ ದೃಢಗೊಂಡ 149 ಪ್ರಕರಣಗಳ ಪೈಕಿ 64 ಮಂದಿಗೆ...

ಉಡುಪಿ ಜಿಲ್ಲೆಯಲ್ಲಿ ಬುಧವಾರ 173 ಜನರಿಗೆ ಕೊರೋನಾ ಪಾಸಿಟಿವ್ ದೃಢ: ಡಾ. ಸುಧೀರ್‌ಚಂದ್ರ ಸೂಡ

ಉಡುಪಿ: ಜಿಲ್ಲೆಯಲ್ಲಿ ಬುಧವಾರ 173 ಕೋವಿಡ್-19 ಸೋಂಕು ದೃಢ ಪ್ರಕರಣಗಳು ಪತ್ತೆಯಾಗಿವೆ. ಇವರಲ್ಲಿ 111 ಜನರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಾಣಿಸಿಲ್ಲ, ಉಳಿದ 62 ಮಂದಿಗೆ ರೋಗ ಲಕ್ಷಣಗಳಿವೆ ಎಂದು ಜಿಲ್ಲಾ ಆರೋಗ್ಯ...

ಬಾಗಲಕೋಟೆ| ಕೊರೋನಾ ಆರ್ಭಟದ ಜೊತೆ ಶುರುವಾಯಿತು ಪ್ರವಾಹದ ಭಯ!

sharing is caring...!

ಜಗದೀಶ .ಎಂ. ಗಾಣಿಗೇರ
ಬಾಗಲಕೋಟೆ: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವಾಗಲೇ ಈಗ ಜಿಲ್ಲೆಯಲ್ಲಿ ಪ್ರವಾಹದ ಭಯ ಜನರಲ್ಲಿ ಕಾಡತೊಡಗಿದೆ. ಕಳೆದ ವರ್ಷ ಪ್ರವಾಹದಿಂದ ಹಾನಿಗೊಳಗಾದ ಮನೆಗಳು, ಆಸ್ತಿ ಪಾಸ್ತಿ ಸರಿಪಡಿಸುವ ಹೊತ್ತಿನಲ್ಲೇ ಈಗ ಪ್ರವಾಹದ ಮುನ್ಸೂಚನೆ ದೊರೆಯುತ್ತಿದ್ದಂತೆ ಜಿಲ್ಲೆಯ ಜನ ಭಯಭೀತರಾಗಿದ್ದಾರೆ.
ಮಹಾರಾಷ್ಟ್ರ ಹಾಗೂ ಬೆಳಗಾವಿಯಲ್ಲಿ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ ಹಾಗೂ ಘಟಪ್ರಭಾ ನದಿಗಳು ತುಂಬಿ ಹರಿಯುವ ಹಂತಕ್ಕೆ ಬಂದು ತಲುಪಿವೆ. ಈಗಾಗಲೇ ಜಿಲ್ಲೆಯ ಕೆಲವೊಂದು ಕಡೆ ನದಿಗಳಿಗೆ ಹೆಚ್ಚು ನೀರು ಹರಿಯುವ ಪ್ರಮಾಣ ಇರುವುದರಿಂದ ನದಿಯ ಸಮೀಪದ ಸೇತುವೆ ಹಾಗೂ ರಸ್ತೆಗಳು ಬಂದ್ ಆಗುವ ಹಂತಕ್ಕೆ ತಲುಪಿವೆ.
ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳು ಉಕ್ಕಿ ಹರಿದ ಪರಿಣಾಮ ಜಿಲ್ಲೆಯ ಬಹುತೇಕ ಎಲ್ಲ ತಾಲ್ಲೂಕಿನ ಗ್ರಾಮಗಳು ಹಾಗೂ ಕೆಲವೊಂದು ನಗರದಲ್ಲಿ ನೀರು ಹೊಕ್ಕು ಜನರ ಬದುಕನ್ನೇ ಕಸಿದುಕೊಂಡಿತ್ತು ಅಷ್ಟು ಭೀಕರತೆಯನ್ನು ಪ್ರವಾಹ ಸೃಷ್ಟಿ ಮಾಡಿತ್ತು. ಇದು ಮಾಸುವ ಮುನ್ನವೇ ಈಗ ಮತ್ತೊಮ್ಮೆ ಪ್ರವಾಹ ಎದುರಾಗಬಹುದು ಎಂಬ ಚಿಂತೆ ಜನರಲ್ಲಿ ಕಾಡಲಾರಂಭಿಸಿದೆ.
ಮುಧೋಳ,ಜಮಖಂಡಿ, ಬೀಳಗಿ,ಬಾಗಲಕೋಟೆ,ಬಾದಾಮಿ ತಾಲ್ಲೂಕಿನ ನೂರಾರು ಗ್ರಾಮಗಳು ಜಲಾವೃತವಾಗುವ ಜತೆಗೆ ರೈತರು ಬೆಳೆದಂತಹ ಕಬ್ಬು ಬೆಳೆ,ಹೆಸರು,ಗೋವಿನ ಜೋಳ ಹೀಗೆ ವಿವಿಧ ರೀತಿಯ ಬೆಳೆಗಳನ್ನು ರೈತರು ತಮ್ಮ ಉಪಜೀವನಕ್ಕೆ ಬೆಳೆದುಕೊಂಡಾಗ ಏಕಕಾಲಕ್ಕೆ ನೀರು ಉಕ್ಕಿ ಹರಿದು ಪ್ರವಾಹ ಉಂಟಾದಾಗ ಎಲ್ಲವೂ ನೀರಿನಲ್ಲಿ ಮುಳುಗಿ ಸಾಕಷ್ಟು ಹಾನಿಯನ್ನು ರೈತರು ಅನುಭವಿಸಿದ್ದರು ಇನ್ನೂ ರೈತರ ಜಮೀನುಗಳು ಮರಳಿ ಬೆಳೆಯಲಾರದಂತಹ ಸ್ಥಿತಿಯನ್ನು ಪ್ರವಾಹ ಮಾಡಿ ಹೋಗಿತ್ತು. ಈಗ ಅದನ್ನೆಲ್ಲ ಸರಿಪಡಿಸಿಕೊಂಡು ರೈತರು ನೆಮ್ಮದಿಯಿಂದ ಬೆಳೆಯನ್ನು ಬೆಳೆದರೆ ಈಗ ಸುರಿಯುತ್ತಿರುವ ಮಳೆ ಮತ್ತು ನದಿಗಳಲ್ಲಿ ನೀರು ಹೆಚ್ಚು ಹರಿಯುವ ಪ್ರಮಾಣ ನೋಡಿ ಜಿಲ್ಲೆಯಲ್ಲಿ ಮತ್ತೊಮ್ಮೆ ಪ್ರವಾಹ ಎದುರಾಗಲಿದೆ ಎಂಬುದು ಚಿಂತೆಗೀಡು ಮಾಡಿದೆ.
ಸತತ ಪ್ರವಾಹ ಹಾಗೂ ಮಳೆಯಿಂದ ಜಿಲ್ಲೆಯ ಜನರು ತಮ್ಮ ಉಪಜೀವನ ನಡೆಸಲು ಕಷ್ಟಪಡುತ್ತಿರುವಾಗಲೇ ಈಗ ಪ್ರಪಂಚದಾದ್ಯಂತ ಹರಡುತ್ತಿರುವ ಕೊರೋನಾ ಸೋಂಕು ಜಿಲ್ಲೆಯ ಜನರನ್ನು ಕಾಡಿದ್ದು 400 ಗಡಿಗೆ ಸೋಂಕಿತರ ಸಂಖ್ಯೆ ಬರುತ್ತಿರುವುದರಿಂದ ಜನ ದುಡಿಯಲು ಹೋಗದಂತಹ ಸ್ಥಿತಿ ನಿರ್ಮಾಣ ಒಂದು ಕಡೆಯಾದರೆ ಈಗ ಹೆಮ್ಮಾರಿ ಪ್ರವಾಹ ವಕ್ಕರಿಸಿದರೆ ಮತ್ತೊಮ್ಮೆ ಊರುಬಿಟ್ಟು ಗಂಜಿಕೇಂದ್ರದಲ್ಲಿ ವಾಸ ಮಾಡಬೇಕಾದ ಸ್ಥಿತಿ ಬಂದುಬಿಡುತ್ತದೆಯೇ ಎಂದು ಪ್ರವಾಹದಿಂದ ಕಷ್ಟ ಅನುಭವಿಸಿದ ಸಂತ್ರಸ್ತರ ನೋವಾಗಿದೆ.
ಕಳೆದ ಬಾರಿ ಪ್ರವಾಹದಿಂದ ಜಿಲ್ಲೆಯ ಜನರಿಗೆ ಆದಂತಹ ನೋವು ಮತ್ತೊಮ್ಮೆ ಆಗಬಾರದು ಎಂದು ಜಿಲ್ಲಾಡಳಿತ ಈಗಾಗಲೇ ಪ್ರವಾಹದ ಮುನ್ಸೂಚನೆ ಅರಿತು ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಇನ್ನೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳವರು ಅಧಿಕಾರಿಗಳ ಸಭೆ ನಡೆಸಿ ಪ್ರವಾಹ ಎದುರಿಸಲು ಏನೇನು ಬೇಕು ಅದನ್ನೆಲ್ಲ  ವ್ಯವಸ್ಥೆ ಮಾಡಿಕೊಳ್ಳಿ, ಜಿಲ್ಲೆಯ ಜನರು ಸಂಕಷ್ಟ ಎದುರಿಸಬಾರದು. ನದಿಪಾತ್ರದ ಜನರಿಗೂ ಕೂಡ ಡಂಗೂರ ಸಾರಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕೂಡ ಅಧಿಕಾರಿಗಳ ಮೂಲಕ ತಿಳಿಸಿದ್ದಾರೆ. ಇದಲ್ಲದೇ ಪ್ರವಾಹದ ಬಂದರೆ ರಕ್ಷಣಾ ಸಾಮಾಗ್ರಿಗಳು ತಕ್ಷಣಕ್ಕೆ ಇರಬೇಕು ಎಂದು ಖರೀದಿ ಮಾಡಿಕೊಳ್ಳಲು ಸಹ ಸೂಚನೆ ನೀಡಿದ್ದಾರೆ.
ಒಟ್ಟಾರೆ ಜಿಲ್ಲೆಯಲ್ಲಿ ಕೊರೋನಾ ಒಂದು ಕಡೆ ಕಟ್ಟಿಹಾಕಲು ಜಿಲ್ಲಾಡಳಿತ ಶ್ರಮಿಸುತ್ತಿರುವಾಗಲಿ ಪ್ರವಾಹ ವಕ್ಕರಿಸಿಕೊಂಡು ಜನರನ್ನು ನೋವಿನಲ್ಲಿ ನೂಕಿಬಿಡುತ್ತದೆ ಎಂಬ ಆತಂಕ ಎಲ್ಲರಲ್ಲಿದೆ.
ಆಲಮಟ್ಟಿಯ ಗರಿಷ್ಠ ಮಟ್ಟ 519.60 ಇದ್ದು ಈಗ 517.58 ಮೀ.ವರೆಗೆ ನೀರು ಸಂಗ್ರಹವಾಗಿದೆ. 123.081 ಟಿಎಂಸಿ ನೀರು ಸಂಗ್ರಹ ಸಾಮಾಥ್ರ್ಯವಿರುವ ಆಲಮಟ್ಟಿ ಜಲಾಶಯದಲ್ಲಿ ಸಧ್ಯ 91.928 ನೀರು ಸಂಗ್ರಹವಾಗಿದೆ. 69868 ಕ್ಯೂಸೆಕ್ಸ್ ನೀರು ಜಲಾಶಯಕ್ಕೆ ಒಳಹರಿವು ಇದ್ದು ಹೊರ ಹರಿವಿನ ಪ್ರಮಾಣ 36130 ಕ್ಯೂಸೆಕ್ಸ್. ಜಮಖಂಡಿ ಸಮೀಪದ ಹಿಪ್ಪರಗಿ ಬ್ಯಾರೇಜಿಗೆ 54 ಸಾವಿರ ಕ್ಯೂಸೆಕ್ಸ್ ಒಳಹರಿವು ಇದ್ದು 53 ಸಾವಿರ ಕ್ಯೂಸೆಕ್ಸ್ ಹೊರಹರಿವಿನ ಪ್ರಮಾಣ ಇದೆ.

Latest Posts

ಕಾಸರಗೋಡು| ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿಯಿಂದ ಗೌರವ

ಕಾಸರಗೋಡು: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಕರಸೇವೆಗಾಗಿ ತೆರಳಿದ್ದ  ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕುಟುಂಬ ಪ್ರಬೋಧನ್ ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರ ಮನೆಗೆ ತೆರಳಿ ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 149 ಪಾಸಿಟಿವ್ ಪ್ರಕರಣ ದೃಢ, 82 ಮಂದಿ ಗುಣಮುಖ, 10 ಬಲಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಕೊರೋನಾಗೆ 10 ಮಂದಿ ಬಲಿಯಾಗಿದ್ದು, 149 ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. 82 ಮಂದಿ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬುಧವಾರ ದೃಢಗೊಂಡ 149 ಪ್ರಕರಣಗಳ ಪೈಕಿ 64 ಮಂದಿಗೆ...

ಉಡುಪಿ ಜಿಲ್ಲೆಯಲ್ಲಿ ಬುಧವಾರ 173 ಜನರಿಗೆ ಕೊರೋನಾ ಪಾಸಿಟಿವ್ ದೃಢ: ಡಾ. ಸುಧೀರ್‌ಚಂದ್ರ ಸೂಡ

ಉಡುಪಿ: ಜಿಲ್ಲೆಯಲ್ಲಿ ಬುಧವಾರ 173 ಕೋವಿಡ್-19 ಸೋಂಕು ದೃಢ ಪ್ರಕರಣಗಳು ಪತ್ತೆಯಾಗಿವೆ. ಇವರಲ್ಲಿ 111 ಜನರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಾಣಿಸಿಲ್ಲ, ಉಳಿದ 62 ಮಂದಿಗೆ ರೋಗ ಲಕ್ಷಣಗಳಿವೆ ಎಂದು ಜಿಲ್ಲಾ ಆರೋಗ್ಯ...

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಕೊರೋನಾ ಪಾಸಿಟಿವ್ ದೃಢ

ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಸಿಎಂ ಯಡಿಯೂರಪ್ಪ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದರಿಂದ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದೆ. ಬೆಂಗಳೂರಿನಲ್ಲಿ ಸಿಎಂ ಜೊತೆಗಿದ್ದ ಹರೀಶ್ ಪೂಂಜಾ ಅವರು ಸಿಎಂಗೆ...

Don't Miss

ಕಾಸರಗೋಡು| ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿಯಿಂದ ಗೌರವ

ಕಾಸರಗೋಡು: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಕರಸೇವೆಗಾಗಿ ತೆರಳಿದ್ದ  ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕುಟುಂಬ ಪ್ರಬೋಧನ್ ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರ ಮನೆಗೆ ತೆರಳಿ ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 149 ಪಾಸಿಟಿವ್ ಪ್ರಕರಣ ದೃಢ, 82 ಮಂದಿ ಗುಣಮುಖ, 10 ಬಲಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಕೊರೋನಾಗೆ 10 ಮಂದಿ ಬಲಿಯಾಗಿದ್ದು, 149 ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. 82 ಮಂದಿ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬುಧವಾರ ದೃಢಗೊಂಡ 149 ಪ್ರಕರಣಗಳ ಪೈಕಿ 64 ಮಂದಿಗೆ...

ಉಡುಪಿ ಜಿಲ್ಲೆಯಲ್ಲಿ ಬುಧವಾರ 173 ಜನರಿಗೆ ಕೊರೋನಾ ಪಾಸಿಟಿವ್ ದೃಢ: ಡಾ. ಸುಧೀರ್‌ಚಂದ್ರ ಸೂಡ

ಉಡುಪಿ: ಜಿಲ್ಲೆಯಲ್ಲಿ ಬುಧವಾರ 173 ಕೋವಿಡ್-19 ಸೋಂಕು ದೃಢ ಪ್ರಕರಣಗಳು ಪತ್ತೆಯಾಗಿವೆ. ಇವರಲ್ಲಿ 111 ಜನರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಾಣಿಸಿಲ್ಲ, ಉಳಿದ 62 ಮಂದಿಗೆ ರೋಗ ಲಕ್ಷಣಗಳಿವೆ ಎಂದು ಜಿಲ್ಲಾ ಆರೋಗ್ಯ...
error: Content is protected !!