Tuesday, August 16, 2022

Latest Posts

ಬಾಗಲಕೋಟೆ ಜಿಲ್ಲಾದ್ಯಂತ ರಾಮನ ಪೂಜೆಯಲ್ಲಿ ಮಿಂದೆದ್ದ ‌ ಭಕ್ತರು

ಬಾಗಲಕೋಟೆ : ಭಾರತೀಯ ಕೋಟ್ಯಾಂತರ ಜನರ ಕನಸು ಇಂದು ನನಸಾಗುವ ಸಮಯ.ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಬೇಕು ಎಂಬ ಕನಸು ಹೊತ್ತಿದ್ದ ಭಕ್ತ ಸಮೂಹ ಸಂಭ್ರಮ‌ ಆಚರಿಸುತ್ತಿದ್ದಾರೆ.
ಮಧ್ಯಾಹ್ನ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಅಯೋದ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ‌ನೆರವೇರಸಲಿದ್ದು ಈಗ ಜಿಲ್ಲೆಯಲ್ಲಿ ರಾಮನ ಭಾವಚಿತ್ರಕ್ಕೆ ಮನೆಯಲ್ಲಿ ಭಕ್ತಿಪೂರ್ವಕವಾಗಿ ಪೂಜಾ ಸಮಾರಂಭವನ್ನು ಮಾಡಲಾಗುತ್ತಿದೆ.
ಅಯೋಧ್ಯೆ ಶ್ರೀ ರಾಮ ಮಂದಿರಕ್ಕೆ ಪ್ರಧಾನಿ ನರೆಂದ್ರ ಮೊದಿ ಯವರಿಂದ ಶಿಲಾನ್ಯಾಸ ಕಾರ್ಯಕ್ರಮ ನಡೆಯುವ ಮುನ್ನ ಕಳ್ಳಿಗುಡ್ಡ ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವಾಲಯದಲ್ಲಿ ಅಭಿಷೇಕ ಪೂಜೆ ಮಾಡಲಾಯಿತು. ಸಿಹಿ ಹಂಚುವ ಮೂಲಕ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು.‌ಜೈ ಶ್ರೀರಾಮ ಎಂಬ ಘೋಷಣೆ ಕೂಗಿ ಸಂಭ್ರಮಿಸಿದರು.ಇದಲ್ಲದೇ ಬಾಗಲಕೋಟೆ ಬಸವೇಶ್ವರ ಭಗವಾಧ್ವಜ ರಾರಾಜಿಸುತ್ತಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss