Sunday, June 26, 2022

Latest Posts

ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 21 ಜನರಿಗೆ ಕೊರೋನಾ ಸೋಂಕು!

ಬಾಗಲಕೋಟೆ: ಜಿಲ್ಲೆಯಲ್ಲಿ ಶನಿವಾರ ಏಳು ಜನರಿಗೆ ಕೊರೋನಾ ಸೋಂಕು ದೃಡಪಟ್ಟಿದ್ದು ಇದುವರೆಗೆ ಒಟ್ಟು 21 ಜನರಿಗೆ ಕೊರೋನಾ ಸೋಂಕು ಅಂಟಿಕೊಂಡಂತಾಗಿದೆ.
ಮಧ್ಯಾಹ್ನ 2 ಹಾಗೂ ಸಂಜೆ 5 ಜನ ಸೇರಿ ಒಟ್ಟು ಏಳು ಜನರಿಗೆ ಹೊಸ ಪ್ರಕರಣಗಳಲ್ಲಿ ಸೋಂಕು ಇರುವುದು ದೃಡಪಟ್ಟಿದೆ.65 ವರ್ಷದ ಪಿ-367 ಸೋಂಕಿತ ವ್ಯಕ್ತಿ 186ರ ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ್ದರು.ಇನ್ನೂ 48 ವರ್ಷದ ಪಿ-368 ಸೋಂಕಿತ ವ್ಯಕ್ತಿ ಪಿ-186ರ
ವ್ಯಕ್ತಿಯ ದ್ವಿತೀಯ ಸಂಪರ್ಕದಲ್ಲಿದ್ದರು.
ಸಂಜೆ ಪ್ರಕಟಗೊಂಡ ಹೆಲ್ತ್ ಬುಲೇಟಿನ್ದಲ್ಲಿ 32 ವರ್ಷದ (ಪಿ-372),32 ವರ್ಷದ (ಪಿ-373) ವ್ಯಕ್ತಿ ಹಾಗೂ 43 ವರ್ಷದ (ಪಿ-379) ವ್ಯಕ್ತಿ  ಹಾಗೂ 43 ವರ್ಷದ (ಪಿ-380) ಸೋಂಕಿತ ವ್ಯಕ್ತಿ 263 ವ್ಯಕ್ತಿಯ ಸಂಪರ್ಕವನ್ನು ಹೊಂದಿದ್ದರು. ಅದೇ ರೀತಿ 47 ವರ್ಷದ ಪಿ-381 ಸೋಂಕಿತ ವ್ಯಕ್ತಿಯು ಕೊರೋನಾ ಲಕ್ಷಣ ಕಂಡು ಬಂದ ಹಿನ್ನಲೆಯಲ್ಲಿ (ಐಎಲ್ಐ) ಆಸ್ಪತ್ರೆಗೆ ದಾಖಲಾಗಿದ್ದರು ಈ ವ್ಯಕ್ತಿಗೂ ಕೂಡ ಸೋಂಕು ಇರುವುದು ದೃಡಪಟ್ಟಿದೆ. ಕೂಡ ಇವರಿಗೂ ಸೋಂಕು ಇರುವುದು ದೃಡಪಟ್ಟಿದೆ.ಸೋಂಕು ದೃಡಪಟ್ಟ ಎಲ್ಲ ವ್ಯಕ್ತಿಗಳನ್ನು ಕೋವಿಡ್ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾ.ರಾಜೇಂದ್ರ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss