ಬಾಗಲಕೋಟೆ ಜಿಲ್ಲೆಯಲ್ಲಿ ನಾಲ್ಕು ಜನರಿಗೆ‌ ಕೊರೋನಾ: ಸೋಂಕಿತರ ಸಂಖ್ಯೆ 184 ಕ್ಕೆ ಏರಿಕೆ

0
33

ಬಾಗಲಕೋಟೆ:ಜಿಲ್ಲೆಯಲ್ಲಿ ಹೊಸದಾಗಿ 4  ಕೋವಿಡ್ ಪ್ರಕರಣ ದೃಢವಾಗಿದೆ.ಸೋಂಕಿತರ ಸಂಖ್ಯೆ 184 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ‌ ತಿಳಿಸಿದ್ದಾರೆ.
ಬಾಗಲಕೋಟೆ ತಾಲೂಕಿನ ಮುಡಪಲಜೀವಿ ಗ್ರಾಮದ ಸೋಂಕಿತ ವ್ಯಕ್ತಿಯ ಪಿ-10642 ಪ್ರಾಥಮಿಕ ಸಂಪರ್ಕ ಹೊಂದಿದ 38 ವರ್ಷದ ಮಹಿಳೆ ಪಿ(ಬಿಜಿಕೆ-181), ಕೆಮ್ಮು, ನೆಗಡಿ, ಜ್ವರದ ಹಿನ್ನಲೆ ಬಾಗಲಕೋಟೆ ನವನಗರದ ಸೆಕ್ಟರ ನಂ.42ರ 40 ವರ್ಷದ ಮಹಿಳೆ ಪಿ(ಬಿಜಿಕೆ-182), ಮುಧೋಳನ ಸೋಂಕಿತ ವ್ಯಕ್ತಿ ಪಿ-7547 ದ್ವಿತೀಯ ಸಂಪರ್ಕ ಹೊಂದಿದ ಮುಧೋಳನ ಬಳಗಾರ ಗಲ್ಲಿಯ 74 ವರ್ಷದ ಮಹಿಳೆ ಪಿ(ಬಿಜಿಕೆ-183), ಕೆಮ್ಮು, ನೆಗಡಿ, ಜ್ವರದ ಹಿನ್ನಲೆ ಬಾಗಲಕೋಟೆ ತಾಲೂಕಿನ ಖಜ್ಜಿಡೋಣಿ ಗ್ರಾಮದ 45 ವರ್ಷದ ಮಹಿಳೆಗೆ ಪಿ(ಬಿಜಿಕೆ-184) ಕೋವಿಡ್ ದೃಢಪಟ್ಟಿದೆ.
ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 1241 ಸ್ಯಾಂಪಲಗಳ ವರದಿ ನಿರೀಕ್ಷೆಯಲ್ಲಿದೆ.‌ ಪ್ರತ್ಯೇಕವಾಗಿ ನಿಗಾದಲ್ಲಿ ಇದ್ದವರು 688,ಇಲ್ಲಿಯವರೆಗೆ ಕಳುಹಿಸಲಾದ ಒಟ್ಟು ಸ್ಯಾಂಪಲ್ 12587,ಒಟ್ಟು ನೆಗಟಿವ್ ಪ್ರಕರಣ 11089ಪಾಜಿಟಿವ್ ಪ್ರಕರಣ 184, ಮೃತ ಪ್ರಕರಣ 5 ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here