Wednesday, July 6, 2022

Latest Posts

ಬಾಗಲಕೋಟೆ ಜಿಲ್ಲೆಯಲ್ಲಿ ಮತ್ತಿಬ್ಬರಿಗೆ ಕೊರೋನಾ: 23ಕ್ಕೇರಿದ ಸೋಂಕಿತರ ಸಂಖ್ಯೆ

ಬಾಗಲಕೋಟೆ: ಕಳೆದ ಐದು ದಿನಗಳಿಂದ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರು ಪತ್ತೆಯಾಗಿರಲಿಲ್ಲ. ಇದರಿಂದ ಜಿಲ್ಲೆಯ ಜನರು ನಿರಾಳವಾಗಿದ್ದರು ಆದರೆ ಶುಕ್ರವಾರ ಮತ್ತೆ ಇಬ್ಬರಿಗೆ ಕೊರೋನಾ ಸೋಂಕು ಇರುವುದು ದೃಡಪಟ್ಟಿದ್ದರಿಂದ 23 ಜನರಿಗೆ ಸೋಂಕು ದೃಢಪಟ್ಟಿದೆ.

ಏಪ್ರೀಲ್ 18ರಂದು ಜಿಲ್ಲೆಯಲ್ಲಿ ಏಳು ಜನರಿಗೆ ಸೋಂಕು ಇರುವುದು ಪತ್ತೆಯಾಗಿತ್ತು.ನಂತರ 23ರವರೆಗೆ ಒಂದೂ ಸೋಂಕು ಇರುವ ಪ್ರಕರಣ ಪತ್ತೆಯಾಗಿರಲಿಲ್ಲ. 217 ವರದಿಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿತ್ತು ಆದರೆ ಅವೆಲ್ಲಾ ನೆಗಟೀವ್ ಬಂದಿದ್ದವು. ಇದರಿಂದ ಜಿಲ್ಲೆಯ ಜನ ಆತಂಕದಿಂದ ದೂರವಾಗಿದ್ದರು.

ಜಿಲ್ಲೆಯ ಜಮಖಂಡಿ ಮತ್ತು ಮುಧೋಳದಲ್ಲಿ ತಲಾ ಒಬ್ಬರಿಗೆ ಕೊರೋನಾ ಸೋಂಕು ಇರುವುದು ಖಚಿತವಾಗಿದೆ ಎಂದು ಶುಕ್ರವಾರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೇಟಿನ್ದಲ್ಲಿ ಜಿಲ್ಲೆಯ ಇಬ್ಬರಿಗೆ ಕೊರೋನಾ ಇರುವುದು ದೃಡಪಡಿಸಲಾಗಿದೆ.

ಮುಧೋಳದ 43 ವರ್ಷದ ಕರ್ತವ್ಯನಿರತ ಪೇದೆ ಪಿ-380 ಸೋಂಕಿತರ ಸಂಪರ್ಕದಿಂದ ಮುಧೋಳದ 28 ವರ್ಷದ ಪಿ.455 ಯುವಕನಿಗೂ ಸೋಂಕು ತಗುಲಿದೆ. ಇನ್ನು ಜಮಖಂಡಿಯ 46 ವರ್ಷದ ಕಟ್ಟಡ

ಕಾರ್ಮಿಕ ಪಿ.456 ವ್ಯಕ್ತಿಗೂ ಸೋಂಕು ಖಚಿತವಾಗಿದ್ದು, ಇವರು ಇಂಪ್ಲೂಯಂಜಾ ಲೈಕ್ ಇನ್ಲೆಸ್ (ಐಎಲ್ಐ)ನಿಂದ ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಗಿದ್ದು, ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ.

23ಜನರಿಗೆ ಸೋಂಕು: ಏ.2ರಂದು ಹಳೆ ಬಾಗಲಕೋಟೆಯ 76 ವರ್ಷದ ವೃದ್ಧನಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾದ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದನು.ನಂತರ ವೃದ್ಧನ ಪತ್ನಿ ಹಾಗೂ ಸಹೋದರನಿಗೆ ಕೊರೋನಾ ಸೋಂಕು ದೃಡಪಟ್ಟಿತು.ಸಧ್ಯ ಆಸ್ಪತ್ರೆಯಿಂದ ಸಹ ಗುಣಮುಖರಾಗಿ ಇಬ್ಬರು ಬಿಡುಗಡೆಗೊಂಡಿದ್ದಾರೆ.

ಬಳಿಕ ಏ. 7ರಂದು ಸೋಂಕು ಖಚಿತಪಟ್ಟಿದ್ದ ವೃದ್ಧನ ಪಕ್ಕದ ಮನೆಯ 41 ವರ್ಷದ ಪಿ.165 ಮಹಿಳೆ ಹಾಗೂ ಮುಧೋಳದ ಗುಜರಾತನ ಧರ್ಮಗುರು ಪಿ.164 ವ್ಯಕ್ತಿಗಳಿಗೂ 2ನೇ ಬಾರಿಯೂ ನೆಗೆಟಿವ್ ಬಂದಿದೆ. ಪಿ.165 ಸೋಂಕಿತ ಮಹಿಳೆಯ ನಾಲ್ಕು ವರ್ಷದ ಗಂಡು ಮಗು, ಮೈದುನನ ಇಬ್ಬರು ಮಕ್ಕಳ 2ನೇ ಬಾರಿಯ ವರದಿ ಶುಕ್ರವಾರ ಸಂಜೆ ಬರಲಿದ್ದು, ಆ ಬಳಿಕ ತಾಯಿ-ಮಕ್ಕಳನ್ನು ಒಟ್ಟಿಗೆ ಆಸ್ಪತ್ರೆಂದ ಬಿಡುಗಡೆ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.

ಕಳೆದ ಐದು ದಿನಗಳಿಂದ ಯಾವುದೇ ಸೋಂಕು ಇರುವುದು ದೃಡಪಟ್ಟಿರಲಿಲ್ಲ. ಶುಕ್ರವಾರ ಮತ್ತೆ ಇಬ್ಬರಿಗೆ ಸೋಂಕು ಇದೆ ಎಂದು ತಿಳಿಯುತ್ತಿದ್ದಂತೆ ಜಿಲ್ಲೆಯ ಜನ ಮತ್ತಷ್ಟು ಭೀತಿ ಎದುರಿಸುವಂತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss