Tuesday, June 28, 2022

Latest Posts

ಬಾಗಲಕೋಟೆ ಜಿಲ್ಲೆಯಲ್ಲಿ ಶೇ.79.67 ರಷ್ಟು ಮತದಾನ

ಹೊಸ ದಿಗಂತ ವರದಿ , ಬಾಗಲಕೋಟೆ:

ಜಿಲ್ಲೆಯ ಎರಡನೇ ಹಂತದಲ್ಲಿ 5 ತಾಲೂಕುಗಳಲ್ಲಿ ಬರುವ 102 ಗ್ರಾ.ಪಂ ಪಂಚಾಯತಿಗಳಿಗೆ ರವಿವಾರ ಮತದಾನ ನಡೆದಿದ್ದು, ಒಟ್ಟು ಶೇ.79.67 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಎರಡನೇ ಹಂತದ 5 ತಾಲೂಕುಗಳ ಪೈಕಿ ಬಾಗಲಕೋಟೆ ಶೇ.82.45 ರಷ್ಟು ಮತದಾನವಾದರೆ, ಹುನಗುಂದ ಶೇ.78.14 ರಷ್ಟು, ಬಾದಾಮಿ ಶೇ.81.16, ಇಲಕಲ್ಲ ಶೇ.75.20 ಹಾಗೂ ಗುಳೇದಗಡ್ಡ ತಾಲೂಕಿನಲ್ಲಿ ಶೇ.81.39 ರಷ್ಟು ಮತದಾನವಾಗಿದೆ. ಬಾಗಲಕೋಟೆ ತಾಲೂಕಿನಲ್ಲಿ ಅತೀ ಹೆಚ್ಚು ಮತದಾನವಾದರೆ, ಅತೀ ಕಡಿಮೆ ಇಲಕಲ್ಲ ತಾಲೂಕಿನಲ್ಲಿ ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಬಾಗಲಕೋಟೆ ತಾಲೂಕಿನಲ್ಲಿ ಬೆಳಿಗ್ಗೆ 7 ರಿಂದ 8 ವರೆಗೆ ಶೇ.9.5, 11 ಗಂಟೆಗೆ ಶೇ.26.4, ಮಧ್ಯಾಹ್ನ 1ಕ್ಕೆ 64.59, ಸಂಜೆ 5ಕ್ಕೆ 82.45 ರಷ್ಟು ಮತದಾನವಾಗಿದೆ. ಹುನಗುಂದ ತಾಲೂಕಿನಲ್ಲಿ 9 ಗಂಟೆಗೆ ಶೇ.6.36, 11 ಗಂಟೆಗೆ 21.3, ಮಧ್ಯಾಹ್ನ 1 ಗಂಟೆಗೆ ಶೇ.43.24, 3 ಗಂಟೆಗೆ ಶೇ.61.58, ಸಂಜೆ 5ಕ್ಕೆ 78.14, ಬಾದಾಮಿ ಬೆಳಿಗ್ಗೆ 9ಕ್ಕೆ ಶೇ.5.06, 11ಕ್ಕೆ ಶೇ.24.21, ಮಧ್ಯಾಹ್ನ 1ಕ್ಕೆ 46.11, 3ಕ್ಕೆ ಶೇ.65, ಸಂಜೆ 5ಕ್ಕೆ 81.16, ಇಲಕಲ್ಲ ಬೆಳಿಗ್ಗೆ ಶೇ.5.47, 11ಕ್ಕೆ ಶೇ.24.61, ಮಧ್ಯಾಹ್ನ 1ಕ್ಕೆ ಶೇ.44.51, 3ಕ್ಕೆ ಶೇ.62.54, ಸಂಜೆ 5ಕ್ಕೆ 75.2, ಗುಳೇದಗುಡ್ಡ ತಾಲೂಕಿನಲ್ಲಿ ಬೆಳಿಗ್ಗೆ 9ವರೆಗೆ ಶೇ.7.33, 11ಕ್ಕೆ ಶೇ.23.37, ಮಧ್ಯಾಹ್ನ 1ಕ್ಕೆ 44.16, 3ಕ್ಕೆ ಶೇ.63.54, ಸಂಜೆ 5ಕ್ಕೆ ಶೇ.81.39 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಮೊದಲನೇ ಹಂತದಲ್ಲಿ ಶೇ.83.32 ರಷ್ಟು ಮತದಾನವಾದರೆ, ಎರಡನೇ ಹಂತದ ಚುನಾವಣೆಯಲ್ಲಿ ಶೇ.79.67 ರಷ್ಟು ಮತದಾನವಾಗುವ ಮೂಲಕ ಒಟ್ಟಾರೆಯಾಗಿ ಶೇ.81.50 ರಷ್ಟು ಮತದಾನವಾಗಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss