Tuesday, August 16, 2022

Latest Posts

ಬಾಗಲಕೋಟೆ ಜಿಲ್ಲೆಯಲ್ಲಿ 115 ಹೊಸ ಪ್ರಕರಣ ಪತ್ತೆ, 87 ಜನ ಗುಣಮುಖ

ಬಾಗಲಕೋಟೆ: ಜಿಲ್ಲೆಯಲ್ಲಿ ಹೊಸದಾಗಿ 115 ಕೊರೊನಾ ಪ್ರಕರಣಗಳು ಮಂಗಳವಾರ ದೃಡಪಟ್ಟಿದ್ದು, ಇದರಿಂದಾಗಿ ಒಟ್ಟಾರೆ 1408 ಕೊವಿಡ್ ಪ್ರಕರಣಗಳು ದೃಡಪಟ್ಟಿವೆ. 828 ಜನ ಗುಣಮುಖರಾಗಿದ್ದಾರೆ. 540 ಜನ ಕೊವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಹೊಸದಾಗಿ ಸೋಂಕು ದೃಡಪಟ್ಟವರ ಪೈಕಿ ಬಾಗಲಕೋಟೆ ತಾಲೂಕಿನಲ್ಲಿ 39, ಬೀಳಗಿ 15, ಹುನಗುಂದ 10, ಮುಧೋಳ 4, ಜಮಖಂಡಿ 31, ಬಾದಾಮಿ 13, ಬೇರೆ ಜಿಲ್ಲೆಯ 3 ಪ್ರಕರಣಗಳು ಪತ್ತೆಯಾಗಿವೆ. ಕೋವಿಡ್ನಿಂದ ಮತ್ತೆ 87 ಜನ ಗುಣಮುಖರಾಗಿದ್ದು, ಬಿಡುಗಡೆ ಮಾಡಲಾಗಿದೆ.
ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 572 ಸ್ಯಾಂಪಲ್ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದ್ದು, ಪ್ರತ್ಯೇಕವಾಗಿ 1264 ಜನ ನಿಗಾದಲ್ಲಿದ್ದಾರೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 233061 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 21084 ನೆಗಟಿವ್ ಪ್ರಕರಣ, 1408 ಪಾಜಿಟಿವ್ ಪ್ರಕರಣ ಹಾಗೂ 42 ಜನ ಮೃತ ಪ್ರಕರಣ ವರದಿಯಾಗಿರುತ್ತದೆ.
ಕೋವಿಡ್-19 ದಿಂದ ಒಟ್ಟು 828 ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು 540 ಮಾತ್ರ ಸಕ್ರಿಯ ಪ್ರಕರಣಗಳು ಇವೆ. ಇಲ್ಲಿವರೆಗೆ ಒಟ್ಟು 160 ಸ್ಯಾಂಪಲ್ಗಳು ಮಾತ್ರ ರಿಜೆಕ್ಟ ಆಗಿರುತ್ತವೆ. ಕಂಟೈನ್ಮೆಂಟ್ ಝೋನ್ 118 ಇದ್ದು, ಇನ್ಸ್ಟಿಟ್ಯೂಶನ್ ಕ್ವಾಂರಂಟೈನ್ನಲ್ಲಿದ್ದ 6296 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರು ಸಾವು
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರೂರ ಗ್ರಾಮದ ನಿವಾಸಿ 56 ವರ್ಷದ ಪುರುಷ ಮಂಗಳವಾರದಂದು ಹೃದಯಾಘಾತದ ತೊಂದರೆಯಿಂದ ಮೃತಪಟ್ಟಿರುತ್ತಾರೆ. ಜಿಲ್ಲೆಯ ಬನಹಟ್ಟಿಯ ನಿವಾಸಿ ಜುಲೈ 26 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಮಧುಮೆಹ ತೊಂದರೆಯಿಂದ ಮಂಗಳವಾರ ಮೃತಪಟ್ಟಿರುತ್ತಾರೆ. ಮೃತಪಟ್ಟವರನ್ನು ಕೋವಿಡ್ ಮಾರ್ಗಸೂಚಿ ಅನ್ವಯ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಮೃತಪಟ್ಟ ಕುಟುಂಬದೊಡನೆ ನೇರ ಸಂಪರ್ಕ ಹೊಂದಿದವರು ಕೂಡಲೇ ಹತ್ತಿರದ ಸರಕಾರಿ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ತಿಳಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss