Friday, August 19, 2022

Latest Posts

ಬಾಗಲಕೋಟೆ ಜಿಲ್ಲೆಯಲ್ಲಿ 148 ಮಂದಿಗೆ ಕೊರೋನಾ ಪ್ರಕರಣ ದೃಢ , 84 ಜನ ಗುಣಮುಖ, ಮೂವರ ಸಾವು

ಬಾಗಲಕೋಟೆ: ಜಿಲ್ಲೆಯಲ್ಲಿ 84 ಜನ ಕೋವಿಡ್ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಹೊಸದಾಗಿ 148
ಕೊರೊನಾ ಪ್ರಕರಣಗಳು ಬುಧವಾರ ದೃಡಪಟ್ಟಿವೆ. ಮೂವರು ಸಾವನೊಪ್ಪಿರುವ ವರದಿಯಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2762ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಇಲ್ಲಿಯವರೆಗೆ ಒಟ್ಟು 1238 ಜನ ಕೋವಿಡ್ನಿಂದ ಗುಣಮುಖರಾಗಿದ್ದಾರೆ. ಹೊಸದಾಗಿ ದೃಡಪಟ್ಟ ಪ್ರಕರಣಗಳಲ್ಲಿ ಬಾಗಲಕೋಟೆ ತಾಲೂಕಿನಲ್ಲಿ 26, ಬಾದಾಮಿ 44, ಹುನಗುಂದ 32, ಬೀಳಗಿ 3, ಮುಧೋಳ 26, ಜಮಖಂಡಿ 16 ಪ್ರಕರಣಗಳು ಕಂಡುಬಂದಿವೆ. ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 157 ಸ್ಯಾಂಪಲ್ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದ್ದು, ಪ್ರತ್ಯೇಕವಾಗಿ 666 ಜನ ನಿಗಾದಲ್ಲಿದ್ದಾರೆ.
ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 33298 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 30101 ನೆಗಟಿವ್ ಪ್ರಕರಣ, 2762 ಪಾಜಿಟಿವ್ ಪ್ರಕರಣ ಹಾಗೂ 55 ಜನ ಮೃತ ಪ್ರಕರಣ ವರದಿಯಾಗಿರುತ್ತದೆ. ಇನ್ನು 1389 ಮಾತ್ರ ಸಕ್ರಿಯ ಪ್ರಕರಣಗಳು ಇವೆ. ಇಲ್ಲಿವರೆಗೆ ಒಟ್ಟು 187 ಸ್ಯಾಂಪಲ್ಗಳು ಮಾತ್ರ ರಿಜೆಕ್ಟ ಆಗಿರುತ್ತವೆ. ಕಂಟೈನ್ಮೆಂಟ್ ಝೋನ್ 182 ಇದ್ದು, ಇನ್ಸ್ಟಿಟ್ಯೂಶನ್ ಕ್ವಾಂರಂಟೈನ್ನಲ್ಲಿದ್ದ 8237 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ನಿಂದ ಮೃತಪಟ್ಟವರ ವಿವರ :
ತೇರದಾಳದ ನಿವಾಸಿ 63 ವರ್ಷದ ಪುರುಷ ಆಗಸ್ಟ 2 ರಂದು ಆಸ್ಪತ್ರೆಗೆ ದಾಖಲಾಗಿದ್ದು, ತೀವ್ರ ಉಸಿರಾಟದ ತೊಂದರೆಯಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಬಾಗಲಕೋಟೆಯ ನಿವಾಸಿ 58 ವರ್ಷದ ಪುರುಷ ಆಗಸ್ಟ 1 ರಂದು ಖಾಸಗಿ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಮಧುಮೇಹ, ರಕ್ತದ ಒತ್ತಡ ಮತ್ತು ಕೋವಿಡ್ ಸೋಂಕಿನ ತೊಂದರೆಯಿಂದ ಮೃತಪಟ್ಟಿರುತ್ತಾರೆ. ಬಾದಾಮಿ ನಿವಾಸಿ 65 ವರ್ಷದ ಪುರುಷ ಆಗಸ್ಟ 2 ರಂದು ಖಾಸಗಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದು, ತೀವ್ರ ಉಸಿರಾಟದ ತೊಂದರೆಯಿಂದ ಶುಕ್ರವಾರ ಮೃತಪಟ್ಟಿರುತ್ತಾರೆ. ಮೃತಪಟ್ಟವರನ್ನು ಕೋವಿಡ್ ಮಾರ್ಗಸೂಚಿಯ ಪ್ರಕಾರ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!