Monday, August 8, 2022

Latest Posts

ಬಾಗಲಕೋಟೆ ಜಿಲ್ಲೆಯಲ್ಲಿ 27 ಹೊಸ ಕೋವಿಡ್ ಪ್ರಕರಣ ಪತ್ತೆ

ಬಾಗಲಕೋಟೆ: ಜಿಲ್ಲೆಯಲ್ಲಿ ಹೊಸದಾಗಿ 27 ಕೊರೊನಾ ಪ್ರಕರಣಗಳು ಸೋಮವಾರ ದೃಢಪಟ್ಟಿದ್ದು, ಇದರಿಂದಾಗಿ ಒಟ್ಟಾರೆ 1293 ಕೊವಿಡ್ ಪ್ರಕರಣಗಳು ದೃಢಪಟ್ಟಿವೆ. 741 ಜನ ಗುಣಮುಖರಾಗಿದ್ದಾರೆ. 512 ಜನ ಕೊವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಹೊಸದಾಗಿ ದೃಢಪಟ್ಟ ಸೋಂಕಿತರ ಪೈಕಿ ಜಮಖಂಡಿ ತಾಲೂಕಿನಲ್ಲಿ 15, ಬಾಗಲಕೋಟೆ 4, ಬಾದಾಮಿ, ಹುನಗುಂದ ತಲಾ 2, ಮುಧೋಳ 1 ಹಾಗೂ ಬೇರೆ ಜಿಲ್ಲೆಯ 3 ಪ್ರಕರಣಗಳು ಪತ್ತೆಯಾಗಿವೆ. ಸೋಂಕು ದೃಡಪಟ್ಟವರ ಪೈಕಿ 13 ಕೆಮ್ಮು, ನೆಗಡಿ ಜ್ವರ ಹಾಗೂ 2 ತೀವ್ರ ಉಸಿರಾಟದ ಲಕ್ಷಣದಿಂದ ಕೂಡಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss