ಬಾಗಲಕೋಟೆ: ಜಿಲ್ಲೆಯಲ್ಲಿ ಮತ್ತೆ 9 ಜನರಿಗೆ ಕೋವಿಡ್ ಸೋಂಕು ದೃಡಪಟ್ಟಿದ್ದು, ಸೋಂಕಿತರ ಸಂಖ್ಯೆ 88ಕ್ಕೆ ಏರಿಕೆಯಾಗಿರುವುದಾಗಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಮುಧೋಳ ತಾಲೂಕಿನ 5 ಜನ, ಬೀಳಗಿ ತಾಲೂಕಿನ 3 ಹಾಗೂ ಬಾದಾಮಿ ತಾಲೂಕಿನ ಓರ್ವ ವ್ಯಕ್ತಿ ಸೇರಿ 9 ಜನರಿಗೆ ಕೋವಿಡ್ ಸೋಂಕು ದೃಡಪಟ್ಟಿದೆ. ಮುಧೋಳ ತಾಲೂಕಿನ 31 ವರ್ಷದ ಪುರುಷ ಪಿ-3412, 28 ವರ್ಷದ ಯುವತಿ ಪಿ-3413, 34 ವರ್ಷದ ಪುರುಷ ಪಿ-3414, 31 ವರ್ಷದ ಪುರುಷ ಪಿ-3415, 14 ವರ್ಷದ ಬಾಲಕ ಪಿ-3416, ಬೀಳಗಿ ತಾಲೂಕಿನ 48 ವರ್ಷದ ಪುರುಷ ಪಿ-3664, 42 ವರ್ಷದ ಮಹಿಳೆ ಪಿ-3666, 28 ವರ್ಷದ ಯುವಕ ಪಿ-3667 ಹಾಗೂ ಬಾದಾಮಿ ತಾಲೂಕಿನ 32 ವರ್ಷದ ಪುರುಷ ಪಿ-3665 ಕೋವಿಡ್ ಇವರಿಗೆ ಕೋವಿಡ್ ದೃಡಪಟ್ಟಿದೆ.
ಇವರೆಲ್ಲರೂ ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿದ್ದು, ಮಹಾರಾಷ್ಟ್ರದ ನಂಟಿನಿಂದ ಕೋವಿಡ್ ದೃಡಪಟ್ಟಿದೆ. ಜಿಲ್ಲೆಗೆ ಆಗಮಿಸಿದಾಗ ಅವರೆಲ್ಲರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಕೋವಿಡ್ ದೃಡಪಟ್ಟ ನಂತರ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಸಿಪ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಾರೆಯಾಗಿ 774 ಸ್ಯಾಂಪಲ್ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಇಲ್ಲಿಯವರೆಗೆ ಜಿಲ್ಲಾ ಕೋವಿಡ್ ಲ್ಯಾಬ್ನಲ್ಲಿ ಒಟ್ಟು 169 ಸ್ಯಾಂಪಲ್ಗಳನ್ನು ಪರಿಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 479 ಸ್ಯಾಂಪಲ್ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಪ್ರತ್ಯೇಕವಾಗಿ 1329 ಜನರ ಮೇಲೆ ನಿಗಾ ವಹಿಸಲಾಗುತ್ತಿದೆ.
ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 8344 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ 7750 ನೆಗಟಿವ್ ಪ್ರಕರಣ, 88 ಪಾಜಿಟಿವ್ ಪ್ರಕರಣ ಹಾಗೂ ಒಂದು ಮೃತ ಪ್ರಕರಣ ವರದಿಯಾಗಿರುತ್ತದೆ. ಕೋವಿಡ್-19 ದಿಂದ ಒಟ್ಟು 71 ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು 18 ಜನ ಕೋವಿಡ್ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಬಾದಾಮಿ ತಾಲೂಕಿನ ಢಾಣಕಶಿರೂರ ಗ್ರಾಮ, ಬಾದಾಮಿ ಚಾಲುಕ್ಯ ನಗರ, ಮುಧೋಳ ನಗರದ ವಡ್ಡರಗಲ್ಲಿ ಸೇರಿ ಮೂರು ಕಂಟೈನ್ಮೆಂಟ್ ಝೋನ್ಗಳು ಮಾತ್ರ ಇವೆ. ಇಲ್ಲಿವರೆಗೆ ಒಟ್ಟು 13 ಸ್ಯಾಂಪಲ್ಗಳು ಮಾತ್ರ ರಿಜೆಕ್ಟ ಆಗಿರುತ್ತವೆ. 14 ದಿನಗಳ ಕಾಲ ಇನ್ಸ್ಟಿಟ್ಯೂಶನ್ ಕ್ವಾಂರಂಟೈನ್ನಲ್ಲಿದ್ದ 1671 ಜನರನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಸ್ಥಾಪಿಸಲಾದ 9 ಚೆಕ್ಪೋಸ್ಟಗಳ ಪೈಕಿ ಸದ್ಯ 3 ಚೆಕ್ ಪೋಸ್ಟಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿವರೆಗೆ ಚೆಕ್ಪೋಸ್ಟಗಳ ಮೂಲಕ 55276 ವಾಹನಗಳ ತಪಾಸಣೆ ಹಾಗೂ 2,13,922 ಜನರನ್ನು ಥರ್ಮಲ್ ಸ್ಕ್ರೀನಿಂಗ್ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.