ಬಾಗಲಕೋಟೆ: ಪ್ರಸಕ್ತ ವರ್ಷದ 74ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಭಾರತ ಸರಕಾರವು ಗೃಹರಕ್ಷಕ ಇಲಾಖೆಯಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಅಧಿಕಾರಿಗಳಿಗೆ ನೀಡಲಾಗುವ ರಾಷ್ಟ್ರಪತಿ ಪದಕವನ್ನು ಬಾಗಲಕೋಟೆ ಜಿಲ್ಲೆಯ ಗೃಹರಕ್ಷಕ ದಳದ ಪ್ಲಟೂನ್ ಕಮಾಂಡರ ಐ.ಬಿ.ಹುನಗುಂದ ಅವರಿಗೆ ಲಭಿಸಿದೆ. ಪದಕ ಪಡೆದವರನ್ನು ಬಾಗಲಕೋಟೆ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರು ಹಾಗೂ ಸಿಬ್ಬಂದಿಗಳು ಅಭಿನಂಧಿಸಿದ್ದಾರೆ.