ಜಗದೀಶ ಎಂ.ಗಾಣಿಗೇರ
ಬಾಗಲಕೋಟೆ: ಗರ್ಭಿಣಿ ಮಹಿಳೆಯೊಬ್ಬಳಿಗೆ ಅಂಟಿಕೊಂಡ ಮಹಾ ಹೆಮ್ಮಾರಿ ಕೊರೋನಾ ಈಗ ಹದಿನೈದು ಜನರಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದು ಇನ್ನೂ ಎಷ್ಟು ಜನರಲ್ಲಿ ಈ ಸೋಂಕು ತಾಗಿರಬಹುದು ಎಂಬುದು ಈಗ ನಿಗೂಢವಾಗಿದೆ. ಬಾದಾಮಿ ತಾಲ್ಲೂಕಿನಲ್ಲಿ
ಬರುವ ಡಾಣಕಶಿರೂರ ಗ್ರಾಮದಲ್ಲಿ ದಿನದಿಂದ ದಿನಕ್ಕೆ ಸ್ಪೋಟಗೊಳ್ಳುತ್ತಿರುವ ಕೊರೋನಾ ಸೋಂಕು ಈಗ ಇಡೀ ಬಾದಾಮಿ ತಾಲ್ಲೂಕಿನ ಜನರಲ್ಲೇ ತಲ್ಲಣ ಉಂಟು ಮಾಡಿದೆ.
ಬಾದಾಮಿ ತಾಲ್ಲೂಕಿನ ಡಾಣಕಶಿರೂರ ಗ್ರಾಮದ ಗರ್ಭಿಣಿ ಮಹಿಳೆ (ಪಿ.607)ಗೆ ಮೊದಲು ಸೋಂಕು ತಗುಲಿದ್ದು ನಂತರ ಎರಡು ದಿನಗಳ ಬಳಿಕ ಒಂದೇ ದಿನದಲ್ಲಿ ಹನ್ನೆರಡು ಜನರಿಗೆ ಈ ಮಹಿಳೆಯಿಂದ ಸೋಂಕು ಹರಡಿದೆ. ಇದರ ಬಳಿಕ ಗುರುವಾರ ಮತ್ತೆ ಮೂರು ಜನರಿಗೆ ಸೋಂಕು ತಗುಲಿದ್ದು ಇದರಿಂದ ಒಂದೇ ಮಹಿಳೆಯಿಂದ ಹದಿನೈದು ಜನರಿಗೆ ಈ ಸೋಂಕು ಹರಡಿದೆ.
ಈಗಾಗಲೇ ಈ ಮಹಿಳೆಗೆ ಪ್ರಾಥಮಿಕ ಸಂಪರ್ಕ ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರನ್ನು ಕ್ವಾರಂಟೈನ್ ಮಾಡುವ ಕೆಲಸ ವೇಗವಾಗಿ ನಡೆಯುತ್ತಿದೆ.
ನಾಲ್ಕು ಜಿಲ್ಲೆಯಲ್ಲಿ ಪ್ರಯಾಣ
ಮಹಿಳೆಯ ಸೀಮಂತ ಕಾರ್ಯಕ್ರಮದಲ್ಲೇ ಭಾಗವಹಿಸಿದವರಿಗೆ ಹೆಚ್ಚು ಕೊರೋನಾ ಸೋಂಕು ಹರಡಿದೆ.ಇನ್ನೂ ಗರ್ಭಿಣಿ ಮಹಿಳೆಯ ಸೋಂಕು
ಡಾಣಕಶಿರೂರ ಗ್ರಾಮಕ್ಕೆ ಸೀಮಿತವಾಗದೇ ನಾಲ್ಕು ಜಿಲ್ಲೆಗೆ ವ್ಯಾಪಿಸಿರುವ ಶಂಕೆ ಇದೆ.ಗರ್ಭಿಣಿ ಮಹಿಳೆಯ ಮನೆಯ ಪಕ್ಕದಲ್ಲೇ ಸಂಬಂಧಿಕರ ಮದುವೆಗೆಂದು ಹೋಗಿ ಬಂದವರನ್ನು ಕೂಡ ಕೊಪ್ಪಳದಲ್ಲಿ ಹಲವರನ್ನು ಕ್ವಾರಂಟೈನ್ ಮಾಡಲಾಗಿದೆ. ಇನ್ನೂ ಗದಗ ತಾಲ್ಲೂಕಿನ ರೋಣ
ತಾಲ್ಲೂಕಿಗೂ ಮಹಿಳೆ ಪ್ರಯಾಣ ಮಾಡಿದ್ದಾರೆ ಎಂದು ಪ್ರಾಥಮಿಕವಾಗಿ ಮಾಹಿತಿ ಕಲೆ ಹಾಕಲಾಗಿದೆ.ಧಾರವಾಡ ಜಿಲ್ಲೆಗೂ ಈ ಮಹಿಳೆ ಪ್ರಯಾಣಿಸಿದ್ದಾಳೆ. ಈಗ ನಾಲ್ಕು ಜಿಲ್ಲೆಗಳಿಗೆ ಗರ್ಭಿಣಿಯ ಸೋಂಕು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಹೆಚ್ಚಾಗುವ ಸಾಧ್ಯತೆ
ಇನ್ನೂ ಗರ್ಭಿಣಿ ಮಹಿಳೆಯಿಂದ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧತೆಯನ್ನು ಅಲ್ಲಗಳೆಯುವಂತಿಲ್ಲ.ಗಭರ್ಿಣಿ ಮಹಿಳೆಯ ಸೀಮಂತ
ಕಾರ್ಯಕ್ರಮದಲ್ಲಿ ಸುಮಾರು ಜನ ಭಾಗವಹಿಸಿದ್ದರು. ಇವರೆಲ್ಲಾ ಒಂದೇ ಗ್ರಾಮದವರು ಆಗಿರಲಿಲ್ಲ ಅಕ್ಕಪಕ್ಕದ ಗ್ರಾಮದವರು ಗವಹಿಸಿರಬೇಕು.ಇನ್ನೂ ಇದೇ ಗ್ರಾಮದಲ್ಲಿ ಸೋಂಕಿತರು ಹೆಚ್ಚಾಗಿರುವುದರಿಂದ ಆ ಜನ ಎಲ್ಲೆಲ್ಲೆ ಸಂಚಾರ ಮಾಡಿದ್ದಾರೆ. ಅವರು
ಯಾರೊಂದಿಗೆ ಸಂಪರ್ಕ ಹೊಂದಿದ್ದಾರೆ,ಯಾವ ನಗರಗಳಿಗೆ ಪ್ರಯಾಣ ಮಾಡಿದ್ದಾರೆಂಬ ಮಾಹಿತಿಯನ್ನು ಕಲೆ ಹಾಕುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಡಾಣಕಶಿರೂರ ಗ್ರಾಮದಲ್ಲಿನ ಕೆಲವೊಂದು ಸೋಂಕಿತರ ಸಂಪರ್ಕದಲ್ಲಿರುವವರು ಹಾಗೂ ಸೋಂಕಿತರು ಹಿಂದೆ ಎಟಿಎಂ ಹಾಗೂ ತಮ್ಮ ಗ್ರಾಮದ ಸಮೀಪ ನಡೆಯುವ ಸಂತೆ,ನಗರಗಳಿಗೆ ಹೋಗಿದ್ದಾರೆ ಎನ್ನಲಾಗಿದೆ. ಇದನ್ನೆಲ್ಲಾ ಪತ್ತೆ ಹಚ್ಚುವ ಜತೆಗೆ ಅಲ್ಲಲ್ಲಿ ಗ್ರಾಮಗಳಲ್ಲಿ ಪ್ರಾಥಮಿಕ ಹಂತದಲ್ಲಿ ಸೋಂಕಿತರ ಸಂಪರ್ಕದಲ್ಲಿದ್ದವರು ಕಂಡುಬಂದರೆ ಅಂತಹವರನ್ನು ಕ್ವಾರಂಟೈನ್ ಮಾಡುವ ಕೆಲಸ ಜಿಲ್ಲಾಡಳಿತ ಚುರುಕಿನಿಂದ ಮಾಡುತ್ತಿದೆ.
ಪತ್ತೆಯಾಗುತ್ತಿಲ್ಲ ಗರ್ಭಿಣಿ ಣಿಯ ಸೋಂಕಿನ ಮೂಲ
ಗರ್ಭಿಣಿ ಮಹಿಳೆಗೆ ಯಾವ ಮೂಲದಿಂದ ಹಾಗೂ ಎಲ್ಲಿಂದು ಸೋಂಕು ತಗುಲಿದೆ ಎಂಬುದನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆಯಾದರೂ
ಸೋಂಕಿನ ಮೂಲಕ್ಕೆ ಸ್ಪಷ್ಟ ಉತ್ತರವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯಿಂದ ಗುರುವಾರ ಮತ್ತೆ 206 ಸ್ಯಾಂಪಲ್ಗಳ ವರದಿ ಕಳುಹಿಸಲಾಗಿದ್ದು,ಇದರಲ್ಲಿ ಬಾದಾಮಿ ತಾಲ್ಲೂಕಿನಿಂದ 55 ಸ್ಯಾಂಪಲ್ಗಳನ್ನು ಸಂಗ್ರಹಿಸಿ ಕಳುಹಿಸಲಾಗಿದೆ.