Monday, July 4, 2022

Latest Posts

ಬಾಗಲಕೋಟೆ| ಡ್ರಗ್ಸ್ ದಂಧೆ ಮುಕ್ತ‌ ಕರ್ನಾಟಕ: ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ

ಬಾಗಲಕೋಟೆ: ಡ್ರಗ್ಸ್ ದಂಧೆ ಮುಕ್ತ‌ ಕರ್ನಾಟಕ ಮಾಡುವಂತೆ ಆಗ್ರಹಿಸಿ ಬಾಗಲಕೋಟೆ ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ‌ ಕ್ಯಾ.ರಾಜೇಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು.

ಬಾಗನವನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಡ್ರಗ್ಸ್ ದಂಧೆ ಮುಕ್ತ‌ ಕರ್ನಾಟಕ ಮಾಡಬೇಕು ಎಂದು ಘೋಷಣೆ ಕೂಗಿದರು. ಯಾವುದೇ ಒತ್ತಡಗಳಿಗೆ ಒಳಗಾಗದೇ ನಿಷ್ಪಕ್ಷಪಾತ ವಾಗಿ ತನಿಖೆ ನಡೆಸಿ ಡ್ರಗ್ಸ್ ದಂಧೆಯನ್ನು ಮಾಡುವವರ ಮೇಲೆ‌ಕಠಿಣ ಕ್ರಮ‌ಕೈಗೊಳ್ಳಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.

ಶಾಸಕ‌ ವೀರಣ್ಣ ಚರಂತಿಮಠ, ಬಸವರಾಜ ಯಂಕಂಚಿ.ರಾಜು ನಾಯ್ಕರ, ರಾಜು ರೇವಣಕರ ಸೇರಿದಂತೆ ಅನೇಕರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss